ಅಜ್ಮೇರ್ ದರ್ಗಾ ಮೊರೆ ಹೋದ ರೆಡ್ಡಿ ದಂಪತಿ; ಸೂಫಿ ಸಂತರ ರಾಜಕೀಯ ಭವಿಷ್ಯ ನಿಜವಾಗುತ್ತಾ?

ಅಜ್ಮೇರ್ ದರ್ಗಾ ಮೊರೆ ಹೋದ ರೆಡ್ಡಿ ದಂಪತಿ; ಸೂಫಿ ಸಂತರ ರಾಜಕೀಯ ಭವಿಷ್ಯ ನಿಜವಾಗುತ್ತಾ?

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರು ಮುಸ್ಲಿಂ ಸಮುದಾಯ ಮತಬೇಟೆಗೆ ಭರ್ಜರಿ ದಾಳ ಉರುಳಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ರಾಜಸ್ಥಾನದ ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿರುವ ರೆಡ್ಡಿ ದಂಪತಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ದರ್ಗಾಕ್ಕೆ ಭೇಟಿ ಕೊಟ್ಟ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾ ಚಾದರ ಮತ್ತು ಹೂ ಸಮರ್ಪಣೆ ಮಾಡಿ ಪ್ರಾರ್ಥಿಸಿದರು. ಅಲ್ಲಿನ ಸೂಫಿ ಸಂತ ಸಲ್ಮಾನ್ ಚಿಷ್ಟಿಯವರು ಗಾಲಿ ಜನಾರ್ದನ ರೆಡ್ಡಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಆಶೀರ್ವಾದ ನೀಡಿದರು. ಉರುಸ್ ಷರೀಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಧುರವಾದ ಕವಾಲಿಗಳನ್ನು ಆಲಿಸುತ್ತ ಸಮಯ ಕಳೆದರು.

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಜನಾರ್ದನರೆಡ್ಡಿ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಅಜ್ಮೇರ್‌ ದರ್ಗಾಕ್ಕೆ ಭೇಟಿ ನೀಡಿರೋದು ಮುಸ್ಲಿಂ ಬಾಂಧವರ ಮತಬೇಟೆಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ರೆಡ್ಡಿ ದಂಪತಿಯ ಈ ನಡೆ ಕಾಂಗ್ರೆಸ್, ಬಿಜೆಪಿ ಪಾಳಯದ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ