ಸಮಂತಾ ಬಳಿಕ ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆ ಬಹಿರಂಗ: ಸ್ವೀಟಿಗೆ ಇದೆಯಂತೆ ಈ ಅಪರೂಪದ ಕಾಯಿಲೆ!

ಸಮಂತಾ ಬಳಿಕ ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆ ಬಹಿರಂಗ: ಸ್ವೀಟಿಗೆ ಇದೆಯಂತೆ ಈ ಅಪರೂಪದ ಕಾಯಿಲೆ!

ಸಿನಿಮಾ ರಂಗದಲ್ಲಿ ಅನೇಕರು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಮುನ್ನೆಲೆಗೆ ಬರುತ್ತಿರುವುದು ನಾಯಕಿಯರು. ಎಷ್ಟೇ ಮುದ್ದಾಗಿ ಕಾಣಿಸಿಕೊಂಡರೂ ಸಹ ಒಂದಿಷ್ಟು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.

ತೆಲುಗಿನ ಖ್ಯಾತ ನಟಿಈಗಾಗಲೇ ಮಯೋಸಿಟಿಸ್ ನಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪೂನಂ ಕೌರ್ ನರ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ರೇಣು ದೇಸಾಯಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವೆಲ್ಲದರ ನಡುವೆ ನಟಿ ಅನುಷ್ಕಾ ಶೆಟ್ಟಿಗೂ ಕಾಯಿಲೆ ಇದೆಯಂತೆ. ಅದುವೇ ನಗುವ ಕಾಯಿಲೆ.

ಅನುಷ್ಕಾ ಶೆಟ್ಟಿಗೆ ಏನಾದರೂ ನಗು ಬಂದರೆ 20 ನಿಮಿಷಗಳ ಕಾಲ ನಗುತ್ತಲೇ ಇರುತ್ತಾತಂತೆ. ಇದು ಅಪರೂಪದ ಕಾಯಿಲೆಯೂ ಹೌದು ಎಂದು ಪ್ರಚಾರ ಮಾಡಲಾಗಿದೆ. ಇದಲ್ಲದೆ, ತಮಿಳಿನ ಸಂದರ್ಶನವೊಂದರಲ್ಲಿ ಅನುಷ್ಕಾ ಈ ಸುದ್ದಿಯನ್ನು ಬಹಿರಂಗಪಡಿಸಿದ್ದು ಅದು ವೈರಲ್ ಆಗುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುತ್ತಾರೆ ಅನುಷ್ಕಾ ಆಪ್ತರು.

"ಅಂಥದ್ದೇನೂ ಇಲ್ಲ.. ಅನುಷ್ಕಾಗೆ ತೂಕ ಹೆಚ್ಚಾಗುವ ಸಮಸ್ಯೆ ಮಾತ್ರ ಇದೆಯೇ ಹೊರತು ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ" ಎಂದು ಅನುಷ್ಕಾ ಪಿಆರ್ ತಂಡ ಹೇಳುತ್ತಿದ್ದಾರೆ. ಇದರಲ್ಲಿರುವ ಸತ್ಯಾಸತ್ಯತೆ ಬಗ್ಗೆ ಸ್ವತಃ ಅನುಷ್ಕಾ ಅವರೇ ಹೊರ ಬಂದು ಸ್ಪಷ್ಟನೆ ನೀಡಿದರೆ ಈ ಸುದ್ದಿಗೆ ಬ್ರೇಕ್ ಬೀಳುವುದು ಖಂಡಿತ.

ಭಾಗಮತಿ ನಂತರಅಭಿನಯದ ಒಂದೇ ಒಂದು ಚಿತ್ರವೂ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿಲ್ಲ. ಭಾಗಮತಿ 2018 ರಲ್ಲಿ ಬಿಡುಗಡೆಯಾಗಿದ್ದು, ಅದರ ನಂತರ ಹೇಮಂತ್ ಮಧುಕರ್ ನಿರ್ದೇಶನದ ನಿಶ್ಶಬ್ದಂ ಚಿತ್ರ ಒಟಿಟಿಯಲ್ಲಿ ಬಂದಿತ್ತು. ಇದು ಸಹ ಅಷ್ಟೊಂದು ಹಿಟ್ ಆಗಲಿಲ್ಲ. ಹಾಗಾಗಿ ಈಗ ಆಕೆಯ ನಿರೀಕ್ಷೆಯೆಲ್ಲಾ ನವೀನ್ ಪೊಲಿಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಚಿತ್ರದ ಮೇಲಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದಾರೆ. 'ಮಿಸ್ ಶೆಟ್ಟಿ.. ಮಿಸ್ಟರ್ ಪೊಲಿಶೆಟ್ಟಿ' ಎಂದು ಟೈಟಲ್ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.