ಹನೂರು: ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುವ ವೇಳೆ ಅಪಘಾತ

ಹನೂರು: ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುವ ವೇಳೆ ಅಪಘಾತ

ನೂರು: ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಹಿಂದಿರುಗುತ್ತಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ರಸ್ತೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿರುವ ಘಟನೆ ರಾಮಾಪುರ – ದಿನ್ನಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.

ದಿನ್ನಳ್ಳಿ ಪಿಡಿಒ ಸೋಮಶೇಖರ್ ಗಾಯಗೊಂಡ ಗ್ರಾ.ಪಂ.

ಅಭಿವೃದ್ಧಿ ಅಧಿಕಾರಿ.

ಸೋಮಶೇಖರ್ ಅವರು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುವ ವೇಳೆ ಕೋಳಿ ಸಾಕಾಣಿಕೆಯ ಗೂಡ್ಸ್ ಆಟೋ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸೋಮಶೇಖರ್ ತಲೆಗೆ ತೀವ್ರ ಪೆಟ್ಟಾಗಿದೆ.

ಕೂಡಲೇ ಗಾಯಾಳುವನ್ನು ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆಯ ಆಸ್ಪತ್ರೆಗೆ ರವಾನಿಸಲಾಗಿದೆ.