ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ವರಿಷ್ಠರ ಬುಲಾವ್‌

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ವರಿಷ್ಠರ ಬುಲಾವ್‌

ಬೆಂಗಳೂರು: ಪಂಚಮಸಾಲಿ ಮೀಸಲು ಹೋರಾಟಕ್ಕೆ ಸಂಬಂಧಪಟ್ಟಂತೆ ರಾಜ್ಯ ನಾಯಕತ್ವದ ವಿರುದ್ಧವೇ ಸಿಡಿದು ನಿಂತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ರಾಷ್ಟ್ರೀಯ ನಾಯಕರು ದಿಲ್ಲಿಗೆ ಬುಲಾವ್‌ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ದಿಲ್ಲಿಗೆ ಬರುವಂತೆ ಸೂಚಿಸಿದ್ದಾರೆ.

ಯತ್ನಾಳ್‌ಗೆ ಕಾರಣ ಕೇಳಿ ವರಿಷ್ಠರು ನೋಟಿಸ್‌ ನೀಡಿ ದ್ದಾರೆ ಎಂಬುದು ಸೋಮವಾರ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ ವಿಜಯ ಪುರದಲ್ಲಿ ಖುದ್ದು ಯತ್ನಾಳ್‌ ಅವರೇ ಈ ಸಂಗತಿಯನ್ನು ನಿರಾಕರಿಸಿದ್ದಾರೆ. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ವರಿಷ್ಠರೇ ಯತ್ನಾಳ್‌ಗೆ ದಿಲ್ಲಿಗೆ ಬರು ವಂತೆ ಸೂಚಿಸಿದ್ದಾರೆೆ ಎಂದು ತಿಳಿದು ಬಂದಿದೆ.

ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್‌ ಈ ವಿಷಯ ತಿಳಿಸಿದ್ದಾರೆ.