ʻಗಣರಾಜ್ಯೋತ್ಸವʼದ ಪರೇಡ್‌ನಲ್ಲಿ ಎಲ್ಲರ ಗಮನ ಸೆಳೆದ ಕರ್ನಾಟಕದ ʻನಾರಿಶಕ್ತಿʼ ಸ್ತಬ್ಧಚಿತ್ರ !

ʻಗಣರಾಜ್ಯೋತ್ಸವʼದ ಪರೇಡ್‌ನಲ್ಲಿ ಎಲ್ಲರ ಗಮನ ಸೆಳೆದ ಕರ್ನಾಟಕದ ʻನಾರಿಶಕ್ತಿʼ ಸ್ತಬ್ಧಚಿತ್ರ !

ವದೆಹಲಿ: ಇಂದು ದೇಶದಲ್ಲಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಟ್ಯಾಬ್ಲೋ(ಸ್ತಬ್ಧಚಿತ್ರ)ಗಳ ಪ್ರದರ್ಶನ ನಡೆಯುತ್ತಿದೆ.

ಈ ಬಾರಿಯ ಕರ್ನಾಟಕದ ಸ್ತಬ್ಧಚಿತ್ರ ʻನಾರಿಶಕ್ತಿ(Nari Shakti)ʼ ಎಲ್ಲರ ಗಮನ ಸೆಳೆದಿದೆ.

ಈ ಮೂಲಕ ಕರ್ನಾಟಕದ ಟ್ಯಾಬ್ಲೋ ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ.ಸೂಲಗಿತ್ತಿ ನರಸಮ್ಮ - ಸೂಲಗಿತ್ತಿ, ತುಳಸಿ ಗೌಡ ಹಾಲಕ್ಕಿ - 'ವೃಕ್ಷ ಮಾತೆ' ಮತ್ತು ಸಾಲುಮರದ ತಿಮ್ಮಕ್ಕ ಅವರು ಸಮಾಜಕ್ಕೆ ಸಲ್ಲಿಸಿದ ಅವರ ನಿಸ್ವಾರ್ಥ ಕೊಡುಗೆಯಿಂದಾಗಿ ಹೆಸರುವಾಸಿಯಾಗಿದ್ದಾರೆ.