ಕಾಂಗ್ರೆಸ್ ನಾಯಕರು ಮಕ್ಕಳು ಬಿಟ್ ಕಾಯಿನ್ ಹ್ಯಾಕ್ ಮಾಡಲು ಸಾಧ್ಯವಿಲ್ಲ
ವಿರೋಧ ಪಕ್ಷದಲ್ಲಿ ಇದ್ದವರು ಹ್ಯಾಂಕರ್ ಗೆ ಸಪೋರ್ಟ್ ಮಾಡಲು ಹೇಗೆ ಸಾಧ್ಯ? ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಜೀರಾಳ ಗ್ರಾಮದಲ್ಲಿ ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಬಿಟ್ ಕಾಯಿನ್ ಕೂಡ ಒಂದು ಕರೆನ್ಸಿಯೇ. ಅದನ್ನು ಇಟ್ಟುಕೊಳ್ಳುವುದು, ವ್ಯವಹಾರ ಮಾಡುವುದು ತಪ್ಪಲ್ಲ. ಈಗ ಅದನ್ನು ಹ್ಯಾಕ್ ಮಾಡಿದ್ದಾರೆ. ಆನ್ ಲೈನ್ ನಲ್ಲಿ ಹ್ಯಾಕ್ ಮಾಡುವುದು ತಪ್ಪು.ಶ್ರೀಕೃಷ್ಣ ಮತ್ತು ಇತರರು ಇದನ್ನು ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿದವರಿಗೆ ಕರ್ನಾಟಕದಲ್ಲಿ ಬೆಂಬಲ ನೀಡಲಾಗಿದೆ ಎಂಬುದು ಸದ್ಯದ ಆರೋಪ. ಅಧಿಕಾರದಲ್ಲಿ ಇಲ್ಲದ ನಾವು ಹ್ಯಾಕ್ ಮಾಡಿದವರಿಗೆ ಸಫೋರ್ಸ್ ಮಾಡಲು ಹೇಗೆ ಸಾಧ್ಯ? ಪೊಲೀಸರಿಂದ ಆರೋಪಿಗಳನ್ನು ಬಚಾವ್ ಮಾಡಲು ಸಾಧ್ಯನಾ? ಹ್ಯಾಕರ್ ಗಳಿಗೆ ಕಾಂಗ್ರೆಸ್ ಮುಖಂಡರ ಮಕ್ಕಳು ಸಪೋರ್ಟ್ ಮಾಡಲು ಹೇಗೆ ಸಾಧ್ಯ? ಕಾಂಗ್ರೆಸ್ ನಾಯಕ ಮಕ್ಕಳು ಪೊಲೀಸರಿಗೆ ಹೇಳಿ ಬಿಡಿಸಲು, ಕೇಸ್ ನಿಧಾನ ಮಾಡಲು ಸಾಧ್ಯವೆ ಎಂದು ರಾಮಲಿಂಗರೆಡ್ಡಿ ಪ್ರಶ್ನಿಸಿದ್ದಾರೆ. ಹ್ಯಾಕ್ ಮಾಡಿದವರಿಗೆ ಸಪೋರ್ಟ್ ಮಾಡಿದ್ದ ಬಗ್ಗೆ ಸದ್ಯ ತನಿಖೆ ಆಗ್ತಿದೆ. ಈ ಬಗ್ಗೆ ನೆದರ್ಲಾಂಡ್, ಅಮೇರಿಕ, ಮಲೇಷಿಯಾದಲ್ಲಿ ಕರ್ನಾಟಕದಲ್ಲಿ ಹ್ಯಾಕ್ ಆಗಿದೆ ಅಂತಾ ಕೇಸ್ ಆಗಿವೆ. ಇಷ್ಟೆಲ್ಲ ಇದ್ದಮೇಲೆ ನಾವು ದಾಖಲೆ ಕೊಡುವುದೇನಿದೆ. ಸರ್ಕಾರ ನಡೆಸುವವರು ತನಿಖೆ ಮಾಡಲಿ ಎಂದ ರಾಮಲಿಂಗಾರೆಡ್ಡಿ ಹೇಳಿದ್ದಾರೆ.