ಚಂದ್ರಬಾಬು ನಾಯ್ಡು ಕಣ್ಣೀರು: ಬ್ಲೂ ಫಿಲ್ಮ್ ಸಿಡಿ ನೆನಪಿಸಿ ಬೈ ಬೈ ಬಾಬು ಎಂದ ಶಾಸಕಿ ರೋಜಾ!
ಅಮರಾವತಿ: ನಿನ್ನೆ (ನ.19) ಆಂಧ್ರ ಪ್ರದೇಶದ ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತಾ ತಮಗಾದ ಅವಮಾನವನ್ನು ವ್ಯಕ್ತಪಡಿಸಿ ಕಣ್ಣೀರಾಕಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಶಾಸಕಿ ರೋಜಾ ಹಳೆಯದ್ದನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.
ರೋಜಾ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಚಂದ್ರಬಾಬು ನಾಯ್ಡು ಈ ಹಿಂದೆ ನಡೆದುಕೊಂಡಿದ್ದ ರೀತಿಯನ್ನು ವಿವರಿಸಿದ್ದಾರೆ. ಇಂದು ಏನಾಗಿದೆಯೋ ಅದು ಕರ್ಮದ ಫಲ ಎಂದು ಏಕವಚನದಲ್ಲಿ ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಂದ್ರಬಾಬು, ವಿಧಿ ಯಾರನ್ನು ಬಿಡುವುದಿಲ್ಲ, ಎಲ್ಲರಿಗೂ ಪಾಠ ಕಲಿಸೇ ಕಲಿಸುತ್ತದೆ. ಈ ಹಿಂದೆ ನೀನು ಎನ್ಟಿಆರ್ ಅವರನ್ನು ಎಷ್ಟು ಅಳಿಸಿದ್ದೀಯ ನೆನಪಿದೆಯಾ? ಅದೇ ಪರಿಸ್ಥಿತಿ ಇಂದು ನಿನಗೆ ಬಂದಿದೆ. ಅದಕ್ಕೆ ಎಲ್ಲರೂ ಹೇಳೋದು, ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ, ನಾವು ಏನು ಮಾಡುತ್ತೆವೋ ನಮಗೂ ಅದೇ ಆಗುತ್ತದೆ.
ನಿನ್ನ ಪತ್ನಿಗೆ ಏನೋ ಅಂದರು ಅಂತಾ ಇಷ್ಟೊಂದು ಸಂಕಟ ಪಡುತ್ತಿದ್ದೀರಲ್ಲ ಹಿಂದೊಂದು ದಿನ ಹೈದರಾಬಾದ್ ವಿಧಾನಸಭೆಯಲ್ಲಿ ನೀವು ಅಧಿಕಾರದಲ್ಲಿ ಇರಬೇಕಾದರೆ ಏನು ಮಾಡಿದ್ರಿ ಅನ್ನೋದನ್ನು ಮರೆತುಬಿಟ್ಟೆಯಾ? ಪೀತಲ ಸುಜಾತ ಜತೆಯಲ್ಲಿ ರೋಜಾ, ಬ್ಲೂ ಫಿಲ್ಮ್ನಲ್ಲಿ ನಟಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಸಿಡಿ ತೋರಿಸಿದ ವಿಚಾರವನ್ನು ಮರೆತುಬಿಟ್ಟೆಯಾ? ಹಾಗದ್ರೆ ನಮಗೂ ಕುಟುಂಬ ಇಲ್ಲವಾ? ಮಕ್ಕಳು ಇಲ್ಲವಾ? ಗೌರವ ಇಲ್ಲವಾ? ನೀವು ಅಧಿಕಾರದಲ್ಲಿ ಇರಬೇಕಾದರೆ, ಯಾರ ಬಗ್ಗೆ ಏನು ಬೇಕಾದರೂ ಅಂತೀಯಾ, ವಿಜಯಮ್ಮ, ಭಾರತಮ್ಮ ಮತ್ತು ಶರ್ಮಿಳಾಮ್ಮ ಬಗ್ಗೆ ಏನೇನು ಮಾತನಾಡಿ, ಎಷ್ಟೊಂದು ಅವಮಾನ ಮಾಡಿದ್ದೀಯಾ ಅನ್ನೋದನ್ನ ಮರೆಯೋಕ್ಕಾಗಲ್ಲ ಎಂದು ರೋಜಾ ಹಳೆಯದ್ದನ್ನು ಕೆದಕಿ ನಾಯ್ಡು ಅವರಿಗೆ ಕುಟುಕಿದರು.
ಇಂದು ಯಾರೋ ಏನೋ ಅಂದ್ರು ಅಂತಾ ಕಣ್ಣೀರಾಕಿ ನಾಟಕ ಆಡುದ್ರೆ ನಿನ್ನನ್ನು ನಂಬಲು ಇಲ್ಲಿ ಯಾರು ತಯಾರಿಲ್ಲ. ನಿಜವಾಗಿಯೂ ನಾನಿಂದು ತುಂಬಾ ಸಂತೋಷವಾಗಿದ್ದೇನೆ. ಏಕೆಂದರೆ, ಒಬ್ಬ ಮಹಿಳೆ ಅಂತಾನೂ ನೋಡದೇ ನನ್ನ ವ್ಯಕ್ತಿತ್ವ ಹರಣ ಮಾಡಿದ್ದೀರಿ, ನಿಯಮಕ್ಕೆ ವಿರುದ್ಧವಾಗಿ ಒಂದು ವರ್ಷ ಸಸ್ಪೆಂಡ್ ಮಾಡಿದ್ರಿ, ಆದರೆ, ಇಂದು ನೀವು ವಿಧಾನಸಭೆಗೆ ಬರುವುದಿಲ್ಲ ಅಂತಾ ಪ್ರಮಾಣ ಮಾಡಿದ್ದೀರಿ, ವಿಧಿಯಾಟ ಅಂದ್ರೆ ಇದೆ ಬಾಬು ಬೈ ಬೈ ಬಾಬು…ಬೈ ಬೈ ಎಂದು ಚಂದ್ರಬಾಬು ನಾಯ್ಡು ಅವರಿಗೆ ರೋಜಾ ತಿರುಗೇಟು ನೀಡಿದ್ದಾರೆ.
ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ್ದ ನಾಯ್ಡು, ವಿಧಾನಸಭೆಯಲ್ಲಿ ತಮ್ಮ ಪತ್ನಿ ಭುವನೇಶ್ವರಿಗೆ ವಿಧಾನಸಭೆಯಲ್ಲಿ ತೀವ್ರವಾಗಿ ಅವಮಾನ ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು ಹಿಂದೆಂದೂ ಅನುಭವಿಸಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು. ವಿಧಾನಸಭೆ ಆರಂಭವಾದಾಗಿನಿಂದಲೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ನಿಂದಿಸುತ್ತಲೇ ಬಂದಿದ್ದಾರೆ. ಅವರು ನನ್ನ ಕುಟುಂಬದವರನ್ನೂ ಬಿಡಲಿಲ್ಲ. ಇದನ್ನು ನಾನು ಸಹಿಸಲು ಸಾಧ್ಯವೇ ಇಲ್ಲ. ಅಧಿಕಾರ ಸಿಗುವವರೆಗೂ ನಾನಿಲ್ಲಿ ಕಾಲಿಡಲ್ಲ' ಎಂದು ನಾಯ್ಡು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ ಗಳಗಳನೆ ಅತ್ತಿದ್ದಾರೆ