ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೀಡಿ ಶಾಕ್​ ಆದ ಯುವಕ..!

ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೀಡಿ ಶಾಕ್​ ಆದ ಯುವಕ..!

ತಿರುಪತಿ (ಆಂಧ್ರ ಪ್ರದೇಶ): ಯುವತಿಯೊಬ್ಬಳು ಮದುವೆ ಹೆಸರಲ್ಲಿ ನಂಬಿಸಿ ಹಣ ದೋಚಿದ್ದಾಳೆಂದು ಆರೋಪಿಸಿ ಯುವಕನೊಬ್ಬ ಶನಿವಾರ ರಾತ್ರಿ ಅಲಿಪಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ವಿಜಯಪುರಂ ವಲಯದ ನರಪರಾಜು ಕಂಡ್ರಿಗ ಮೂಲದ ಸುನೀಲ್​ ಕುಮಾರ್​ (29) ಮಾರ್ಕೆಟ್​ ಕೆಲಸ ಮಾಡಿಕೊಂಡು ಕಳೆದ ಐದು ವರ್ಷಗಳಿಂದ ಸತ್ಯನಾರಾಯಣಪುರಂನಲ್ಲಿ ನೆಲೆಸಿದ್ದಾನೆ. ಈ ವೇಳೆ ಎಡಿಬಿ ಫೈನಾನ್ಸ್​ ಕಾರ್ಪೊರೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಎಂ. ಸುಹಾಸಿನಿ ಎಂಬಾಕೆಯ ಪರಿಚಯವಾಗಿದೆ.

ಇಬ್ಬರ ನಡುವಿನ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ತಾನೊರ್ವ ಅನಾಥೆ ಎಂದು ಹೇಳಿಕೊಂಡಿರುವ ಸುಹಾಸಿನಿ, ಕಳೆದ ಡಿಸೆಂಬರ್​ನಲ್ಲಿ ಸುನೀಲ್​ ಜತೆ ಮದುವೆ ಆಗಿದ್ದಳು. ಈ ವೇಳೆ ಸುನೀಲ್​ ಕುಟುಂಬ ಸುಹಾಸಿನಿಗೆ 20 ಗ್ರಾಂ ಚಿನ್ನಾಭರಣ ತೊಡಿಸಿದ್ದರು. ಈ ನಡುವೆ ಸುಹಾಸಿನಿ ಚಿಕ್ಕಂದಿನಿಂದಲೂ ತನ್ನನ್ನು ನೋಡಿಕೊಳ್ಳುತ್ತಿದ್ದ ಅಂಕಲ್​ಗೆ ಇತ್ತೀಚೆಗಷ್ಟೇ ಲಕ್ಷ ಲಕ್ಷ ರೂ. ಹಣವನ್ನು ನೀಡಿದ್ದಳು. ನನ್ನ ಆರೋಗ್ಯ ಸರಿಯಿಲ್ಲದಿದ್ದಾಗ ಸ್ವಲ್ಪ ಸಾಲ ಮಾಡಿದ್ದೆ ಮತ್ತು ಮದುವೆಗೂ ಹಣ ಪಡೆದುಕೊಂಡಿದ್ದೇ ಎಂದು ಸುಳ್ಳು ಹೇಳಿದ್ದಳು.

ಇತ್ತ ಸುನೀಲ್​ ಕಡೆಯಿಂದ ಲಕ್ಷ ಲಕ್ಷ ಹಣ ಪಡೆದುಕೊಂಡ ಮಾರನೇ ದಿನವೇ ಆಕೆ ಪರಾರಿಯಾಗಿದ್ದಾಳೆ. ಅಂದರೆ, ಇದೇ ತಿಂಗಳ 7ರಂದು ಪರಾರಿಯಾಗಿದ್ದು, ಈವರೆಗೂ ಆಕೆಯ ಸುಳಿವಿಲ್ಲ. ಫೋನ್​ ಕೂಡ ಸ್ವಿಚ್​ ಆಫ್​ ಆಗಿದೆ. ಇದರ ನಡುವೆ ಆಕೆಯ ಆಧಾರ್​ ಕಾರ್ಡ್​ ಸಹಾಯದಿಂದ ಆಕೆಗೆ ಮೊದಲೇ ನೆಲ್ಲೂರು ಜಿಲ್ಲೆಯ ವೆಂಕಟೇಶ್ವರ್​ ಎಂಬಾತನ ಜತೆ ಮದುವೆ ಆಗಿ ಓರ್ವ ಹೆಣ್ಣು ಮಗಳಿದ್ದಾಳೆ ಶಾಕಿಂಗ್​ ವಿಚಾರ ಸುನೀಲ್​ಗೆ ತಿಳಿದಿದೆ. ಇದೀಗ ಸುನೀಲ್​ ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.