ಪಾಕ್ ಎದುರು ಇಂಗ್ಲೆಂಡ್ ಅಬ್ಬರ; ಎರಡೆರಡು ವಿಶ್ವ ದಾಖಲೆ

ಪಾಕ್ ಎದುರು ಇಂಗ್ಲೆಂಡ್ ಅಬ್ಬರ; ಎರಡೆರಡು ವಿಶ್ವ ದಾಖಲೆ

ಆತಿಥೇಯ ಪಾಕಿಸ್ತಾನದ ಎದುರು ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ದಿನವೇ 75 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿ ದಾಖಲೆ ಬರೆದಿದೆ. ಈ ಹಿಂದೆ 1910ರಲ್ಲಿ ಆಸ್ಟ್ರೇಲಿಯಾ 6 ವಿಕೆಟ್‍ಗೆ 494 ರನ್ ಸಿಡಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅಷ್ಟೇ ಅಲ್ಲದೇ ಮೊದಲ ದಿನವೇ ಇಂಗ್ಲೆಂಡ್‍ನ 4 ಬ್ಯಾಟರ್‍ಗಳಾದ ಜ್ಯಾಕ್ ಕ್ರಾವ್ಲಿ(122), ಬೆನ್ ಡಕೆಟ್(107), ಒಲಿ ಪೊಪ್(108), ಹ್ಯಾರಿ ಬ್ರೂಕ್(101*) ಶತಕ ಸಿಡಿಸಿ ಹೊಸ ದಾಖಲೆ ಬರೆದರು.