ಆಂಧ್ರ ಹುಡುಗಿ-ಐರ್ಲೆಂಡ್ ಹುಡುಗ: ದೇಶ, ಭಾಷೆ, ಧರ್ಮದ ಗಡಿ ಮೀರಿದ ವಿಶೇಷ ಪ್ರೇಮ ಕತೆ ಇದು
ವಿಶಾಖಪಟ್ಟಣ: ವಿಶೇಷ ಮದುವೆ ಒಂದಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಾಕ್ಷಿಯಾಗಿದೆ. ಐರ್ಲೆಂಡ್ ಯುವಕ ಮತ್ತು ವಿಶಾಖಪಟ್ಟಣದ ಯುವತಿ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.
ಮಧುರವಾಡ ರೇವಲ್ಲಪಾಳ್ಯದ ಜಿವಿಎಂಸಿ 6ನೇ ವಾರ್ಡ್ನ ಪಿಳ್ಳೆ ಶ್ರೀಮನ್ನಾರಾಯಣ ಮತ್ತು ನಿರ್ಮಲಾ ದಂಪತಿ ಪುತ್ರಿ ಡಾ.
ರಾಬರ್ಟ್ ಅವರು ಜನ್ಮ ಪೂರ್ವಕತೆ, ರೋಗಗಳು ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ರಾಬರ್ಟ್ ಮತ್ತು ಚಾಮುಂಡೇಶ್ವರಿ ನಡುವೆ 2016ರಲ್ಲಿ ಹೈದರಾಬಾದ್ನ ಉಪ್ಪಾಳದಲ್ಲಿ ನಡೆದ ಕಾನ್ಫರೆನ್ಸ್ ವೇಳೆ ಪರಿಚಯವಾಯಿತು. ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳಲು 2018ರಲ್ಲಿ ಇಬ್ಬರು ನಿರ್ಧರಿಸಿದ್ದರು.
2019ರಲ್ಲಿ ಇಬ್ಬರ ಮದುವೆ ನಿಶ್ವಯವಾಗಿತ್ತು. ಇದೀಗ ಇಬ್ಬರ ಮದುವೆ ವಿಶಾಖಪಟ್ಟಣದ ಮಧುರವಾಡದಲ್ಲಿ ನಡೆದಿದ್ದು, ಹಿಂದು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಚಾಮುಂಡೇಶ್ವರಿ ಕುಟುಂಬವರು ಮದುವೆ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ