ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಯಾಗಲಿದೆ 'ಟೈಟಾನಿಕ್'
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ದಂತಕತೆ ಟೈಟಾನಿಕ್ 25 ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಆಚರಿಸಲು ಜೇಮ್ಸ್ ಕ್ಯಾಮರೂನ್ ಈ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿದೆ 4K ವರ್ಷನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಫೆಬ್ರವರಿ 10ರಂದು ವಿಶ್ವದಾದ್ಯಂತ 'ಟೈಟಾನಿಕ್' ಚಿತ್ರದ 4K ಪ್ರಿಂಟ್ ಬಿಡುಗಡೆಗೊಳ್ಳಲಿದೆ. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಎಕ್ಸ್‌ಪೀರಿಯನ್ಸ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ಸಿನಿ ರಸಿಕರು ಈ ಬಾರಿ ವೀಕ್ಷಿಸಬಹುದಾಗಿದೆ.