ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ಪೊಲೀಸ್ ಕಮಿಷನರ್ ವಿರುದ್ಧವೇ ದೂರು ದಾಖಲು

ಬೆಂಗಳೂರು: ಕರ್ತವ್ಯ ಲೋಪ ಹಿನ್ನೆಲೆ ಇತ್ತೀಚೆಗೆ ಸಸ್ಪೆಂಡ್ ಆಗಿದ್ದ ಇನ್ಸ್ಪೆಕ್ಟರ್ ನಂದೀಶ್ ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹುಣಸೂರು ಮೂಲದ ನಂದೀಶ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು.
ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೆ.ಆರ್.ಪುರಂನ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಗುರುವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.ತಡರಾತ್ರಿ 2 ಗಂಟೆವರೆಗೂ ಟಾನಿಕ್ ಬಾರ್ ತೆರೆದಿತ್ತು. ಮಾಹಿತಿ ತಿಳಿದು ಸಿಸಿಬಿ ಪೊಲೀಸರು ಕಳೆದ ವಾರ ದಾಳಿ ನಡೆಸಿ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು. ಸಮಯ ಮೀರಿ ವಹಿವಾಟು ನಡೆಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ನಂದೀಶ್ ವಿರುದ್ಧ ಕೇಳಿಬಂದಿತ್ತು.