RTO' ಅಧಿಕಾರಿಗೆ ಜನಾರ್ಧನ ರೆಡ್ಡಿ ಗಾಳ : ನೆಲಮಂಗಲದಿಂದ ಸ್ಪರ್ಧಿಸುವಂತೆ 'KRPP' ಆಫರ್

ಬೆಂಗಳೂರು : ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ 'RTO' ಅಧಿಕಾರಿಗೆ 'KRPP' ಪಕ್ಷದ ಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಆಫರ್ ನೀಡಿದ್ದು, ನೆಲಮಂಗಲದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಆರ್ ಟಿ ಒ ಅಧಿಕಾರಿ ಎನ್ ನಾಗೇಶ್ ಕುಮಾರ್ ಗೆ ಜನಾರ್ಧನ ರೆಡ್ಡಿ ಆಫರ್ ನೀಡಿದ್ದು, ನೆಲಮಂಗಲದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ , ಈಗಾಗಲೇ ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಲರ್ಟ್ ಆಗಿದ್ದು, ಮತದಾರರನ್ನು ಸೆಳೆಯುವ ಕಸರತ್ತು ಮಾಡುತ್ತಿದೆ. ಅಲ್ಲದೇ ಟಿಕೆಟ್ ಆಕಾಂಕ್ಷಿಗಳ ಫೈಟ್, ಪಕ್ಷಾಂತರ ಪರ್ವ ಕೂಡ ಶುರುವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್: `ಲೀಡರ್ ರಾಮಯ್ಯ' ಹೆಸರಿನಲ್ಲಿ ಪಂಚ ಭಾಷೆಗಳಲ್ಲಿ ಸಿನಿಮಾ!
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಚಾರ್ಮ್ ಹೊಂದಿದ್ದಾರೆ. ಸದ್ಯ ಸಿದ್ದರಾಮಯ್ಯ ಜೀವನಾಧಾರಿತ ಕುರಿತು ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ.
ಹೌದು, ಸಿದ್ದರಾಮಯ್ಯನವರ ಜೀವನಾಧಾರಿತವಾದ ಲೀಡರ್ ರಾಮಯ್ಯ ಸಿನಿಮಾವನ್ನು ಸತ್ಯರತ್ನಮ್ ಎಂಬುವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ 5 ಭಾಷೆಗಳಲ್ಲಿ (ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ) ನಿರ್ಮಾಣವಾಗುತ್ತಿದ್ದು, ವಿಜಯ್ ಸೇತುಪತಿ ನಾಯಕ ನಟನಾಗಿ ನಟಿಸುತ್ತಿದ್ದು, ಈ ಚಿತ್ರವು ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ಚಾರ್ಮ್ ಹೊಂದಿದ್ದಾರೆ. ರಾಜಕೀಯದಲ್ಲಿ ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಸದ್ಯ ವಿರೋಧ ಪಕ್ಷದ ನಾಯಕನಾಗಿರುವ ಅವರು, ಈ ಮೊದಲು ಸಿಎಂ ಆಗಿ ರಾಜ್ಯವನ್ನು ಮುನ್ನಡೆಸಿದ್ದರು. ಅವರು ತಮ್ಮ ಚಿಂತನೆಗಳ ಮೂಲಕವೂ ಆಗಾಗ ಸುದ್ದಿ ಆಗುತ್ತಾರೆ. ಈಗ ಸಿದ್ದರಾಮಯ್ಯ ಬಯೋಪಿಕ್ ತೆರೆಮೇಲೆ ತರಲು ಸಿದ್ಧತೆ ನಡೆದಿದೆ.