ಹಾಸನದಲ್ಲಿ 'ಹೃದಯ ವಿದ್ರಾವಕ' ಘಟನೆ : ಇಲಿ ಪಾಷಾಣ ತಿನ್ನಿಸಿ ಮಗಳನ್ನು ಕೊಂದ ತಾಯಿ

ಹಾಸನ : ತಾಯಿಯೊಬ್ಬಳು ತನ್ನ ಮಕ್ಕಳಿಗೆ ಇಲಿ ಪಾಷಾಣ ತಿನ್ನಿಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ವಿಷ ಸೇವಿಸಿ ಮೂರೂವರೆ ವರ್ಷದ ಮೊಹಮ್ಮದ್ ಆರಾನ್ ಮೃತಪಟ್ಟಿದ್ದು, ಸುನೈನಾ ಎಂಬ 7 ವರ್ಷದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಜೀನತ್ ತನ್ನ ಮಕ್ಕಳಿಗೆ ವಿಷ ನೀಡಿದ್ದಾಳೆ ಎಂದು ಜೀನತ್ ಒಪ್ಪಿಕೊಂಡಿದ್ದಾರೆ. ಇದೀಗ ಜೀನತ್ ಭಾನು ವಿರುದ್ಧ ಹಾಸನದ ಪೆನ್ಶನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.