ಅಶ್ವಿನ್‌ಗೆ ಹಿಂದಿಯಲ್ಲಿ ಕೊಹ್ಲಿ ಸೀಕ್ರೆಟ್ ಮೆಸೇಜ್; "ನನಗೂ ಹಿಂದಿ ಬರತ್ತೆ" ಅಂದ ಆಸೀಸ್ ಆಟಗಾರ

ಅಶ್ವಿನ್‌ಗೆ ಹಿಂದಿಯಲ್ಲಿ ಕೊಹ್ಲಿ ಸೀಕ್ರೆಟ್ ಮೆಸೇಜ್; "ನನಗೂ ಹಿಂದಿ ಬರತ್ತೆ" ಅಂದ ಆಸೀಸ್ ಆಟಗಾರ

ವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡುವ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಪರಸ್ಪರ ಹಿಂದಿಯಲ್ಲಿ ಮಾತನಾಡುತ್ತಾರೆ. ಹಿಂದಿಯಲ್ಲೇ ಸೀಕ್ರೆಟ್ ಸಂದೇಶಗಳನ್ನು ರವಾನಿಸುತ್ತಾರೆ. ವಿದೇಶಿ ಆಟಗಾರರಿಗೆ ಹಿಂದಿ ಅರ್ಥವಾಗದೇ ಇರುವುದು ಟೀಮ್ ಇಂಡಿಯಾ ಆಟಗಾರರಿಗೆ (Usman Khawaja) ಅಡ್ವಾಂಟೇಜ್.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India vs Australia Border-Gavaskar test series) 2ನೇ ಪಂದ್ಯದಲ್ಲಿ ಇಂಥದ್ದೇ ಟ್ರಿಕ್ಸ್ ಬಳಸಲು ಹೋಗಿ ವಿರಾಟ್ ಕೊಹ್ಲಿ ಫೇಲ್ ಆಗಿದ್ದಾರೆ. ಕೊಹ್ಲಿ ಟ್ರಿಕ್ಸ್ ಅನ್ನು ಫೇಲ್ ಮಾಡಿರುವುದು ಆಸ್ಟ್ರೇಲಿಯಾ ಓಪನರ್ ಉಸ್ಮಾತ್ ಖವಾಜ.

ಟೀಮ್ ಇಂಡಿಯಾ ದಾಳಿಗೆ ಸಡ್ಡು ಹೊಡೆದು ನಿಂತ ಉಸ್ಮಾನ್ ಖವಾಜ ಆಕರ್ಷಕ 81 ರನ್ ಗಳಿಸಿ ಆಸ್ಟ್ರೇಲಿಯಾಗೆ ಆಸರೆಯಾದರು. ಉಸ್ಮಾನ್ ಖವಾಜ ಆಡುತ್ತಿದ್ದಾಗ ಅವರನ್ನು ಔಟ್ ಮಾಡಲು ಈ ರೀತಿ ಬೌಲಿಂಗ್ ಮಾಡು ಎಂದು ಸ್ಲಿಪ್'ನಲ್ಲಿದ್ದ ವಿರಾಟ್ ಕೊಹ್ಲಿ ಹಿಂದಿಯಲ್ಲಿ ಹೇಳಿದರು. ಆಗ ಕೊಹ್ಲಿ ಅವರತ್ತ ತಿರುಗಿದ ಉಸ್ಮಾನ್ ಖವಾಜ "ನನಗೂ ಹಿಂದಿ ಅರ್ಥವಾಗುತ್ತದೆ" ಎಂದರು. ಅದನ್ನು ಕೇಳಿದ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉಸ್ಮಾನ್ ಖವಾಜ ಪಾಕಿಸ್ತಾನ ಮೂಲದ ಆಟಗಾರ. ತಂದೆ ತಾಯಿ ಹಿಂದಿ ಮಾತನಾಡುವುದರಿಂದ ಖವಾಜಗೂ ಹಿಂದಿ ಅರ್ಥವಾಗುತ್ತದೆ. ಉಸ್ಮಾನ್ ಖವಾಜ (81) ಮತ್ತು ಪೀಟರ್ ಹ್ಯಾಂಡ್ಸ್'ಕಾಂಬ್ (ಅಜೇಯ 72) ಬಾರಿಸಿದ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ತನ್ನ ಪ್ರಥಮ ಇನ್ನಿಂಗ್ಸ್'ನಲ್ಲಿ 263 ರನ್ ಕಲೆ ಹಾಕಿತು. ಭಾರತ ಪರ ವೇಗಿ ಮೊಹಮ್ಮದ್ ಶಮಿ 60 ರನ್ನಿಗೆ 4 ವಿಕೆಟ್ ಉರುಳಿಸಿದ್ರೆ, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (3/57) ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (3/68) ತಲಾ 3 ವಿಕೆಟ್ ಉರುಳಿಸಿದರು.ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ನಾಯಕ ರೋಹಿತ್ ಶರ್ಮಾ (ಅಜೇಯ 13) ಮತ್ತು ಉಪನಾಯಕ ಕೆ.ಎಲ್ ರಾಹುಲ್ (ಅಜೇಯ 4) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.