ಪಂಚರತ್ನ ಯಾತ್ರೆಯಲ್ಲಿ ಹೆಚ್ ಡಿಕೆ ಜೊತೆ ಕಾಣಿಸಿಕೊಂಡ ರೌಡಿ ಶೀಟರ್

ಬೆಂಗಳೂರು: ಜೆಡಿಎಸ್ ಪಂಚರತ್ನ ರಥ ಯಾತ್ರೆ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಒಬ್ಬಾತ ಪ್ರತ್ಯಕ್ಷನಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ನ.30 ರಂದು ನಡೆದ ನೆಲಮಂಗಲ ಕ್ಷೇತ್ರದ ಪಂಚರತ್ನ ಯಾತ್ರೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಗೊಬ್ಬರದ ರಂಗಸ್ವಾಮಿ ಕಾಣಿಸಿಕೊಂಡಿದ್ದನು. ಈತ ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದನು.