KGF2 ಶೂಟಿಂಗ್‌ ಮುಗಿಸಿದ ಶ್ರೀನಿಧಿ ಶೆಟ್ಟಿ: ಚಿತ್ರೀಕರಣ ಇನ್ನೂ ಬಾಕಿ ಇದೆ!

KGF2 ಶೂಟಿಂಗ್‌ ಮುಗಿಸಿದ ಶ್ರೀನಿಧಿ ಶೆಟ್ಟಿ: ಚಿತ್ರೀಕರಣ ಇನ್ನೂ ಬಾಕಿ ಇದೆ!

'ಕೆಜಿಎಫ್' ಅಂದ ತಕ್ಷಣ ಸಿನಿಪ್ರಿಯರಿಗೆ ರೋಮಾಂಚನ ಆಗುತ್ತೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಮಂದಿ ಎರಡನೇ ಭಾಗದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಆದರೆ ಸದ್ಯ ಸಿನಿಮಾ ಯಾವ ಹಂತದಲ್ಲಿ ಇದೆ. ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್2 ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಚಿತ್ರ ತಂಡ ಇನ್ನೂ ಶೂಟಿಂಗ್‌ ಹಂತದಲ್ಲಿ ಇದೆ. ಈ ವಿಚಾರವನ್ನು ನಟಿ ಶ್ರೀನಿಧಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಕೆಜಿಎಫ್2 ಬಗ್ಗೆ ಇದ್ದ ಗೊಂದಲಗಳು ಕೂಡ ನಿವಾರಣೆ ಆಗಿವೆ.

ಈ ಚಿತ್ರಕ್ಕಾಗಿ ಶ್ರೀನಿಧಿ ಕೂಡ ವರ್ಷಗಟ್ಟಲೇ ತಮ್ಮ ಸಮಯವನ್ನು ಮುಡಿಪಾಗಿ ಇಟ್ಟಿದ್ದಾರೆ. ಚಿತ್ರದ ಜೊತೆಗಿನ ನಂಟಿನ ಬಗ್ಗೆ ಬರೆದು ಕೊಳ್ಳುವುದರ ಜೊತೆಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ ಶ್ರೀನಿಧಿ.

ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೊನೆಯ ದಿನ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರ ಬಗ್ಗೆ ಹಲವು ಪೋಸ್ಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದೆ ಎನ್ನುವುದನ್ನು ಈ ಪೋಸ್ಟ್‌ಗಳ ಮೂಲಕವೇ ಖಚಿತ ಪಡಿಸಿದ್ದಾರೆ. ಡಿಸೆಂಬರ್ 22ರಂದು ಶ್ರೀನಿಧಿ ಕೆಜಿಎಫ್‌ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಹಾಗಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗು ಸೆಟ್‌ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

2016ರಲ್ಲಿ ಸಹಿ ಮಾಡಿದೆ, ಇಂದು ಕೊನೆಯ ಪ್ಯಾಕಪ್: ಶ್ರೀನಿಧಿ ಶೆಟ್ಟಿ

ಶೂಟಿಂಗ್‌ ಮುಗಿಸಿದ ಕೊನೆಯ ದಿನದಂದು ತಾನು ಕೆಜಿಎಫ್ ಚಿತ್ರಕ್ಕೆ ಸಹಿ ಹಾಕಿದ ಮೊದಲ ದಿನವನ್ನು ನೆನಪಿಸಿಕೊಂಡಿದ್ದಾರೆ ಶ್ರೀನಿಧಿ ಶೆಟ್ಟಿ. "ನನಗೆ ತುಂಬಾನೆ ವಿ‍ಶೇಷವಾದ ಶೂಟಿಂಗ್‌ ಮುಗಿಸಿದ್ದೇನೆ. 2016ರಲ್ಲಿ ನಾನು ಈ ಚಿತ್ರಕ್ಕೆ ಸಹಿ ಹಾಕಿದೆ. ಕೊನೆಗೂ ಇಂದು ಇದು ನನ್ನ ಕಡೆ ದಿನದ ಶೂಟಿಂಗ್ ಮತ್ತು ಪ್ಯಾಕಪ್. ಹಾಗಂತ ಇದು ಅಂತ್ಯವಲ್ಲ, ಬದಲಿಗೆ ಹೊಸದರ ಆರಂಭ" ಎಂದು ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಮೂಲಕ ಸತತ 5 ವರ್ಷಗಳಿಂದ ತಮಗೂ ಕೆಜಿಎಫ್‌ಗೂ ಇರುವ ನಂಟನ್ನು ಶ್ರೀನಿಧಿ ಹೇಳಿಕೊಂಡಿದ್ದಾರೆ.

ವೇಗವಾಗಿ ಸಾಗುತ್ತಿವೆ kgf ಚಿತ್ರದ ಕೆಲಸಗಳು!

ಸದ್ಯಕ್ಕೆ ನಟಿ ಶ್ರೀನಿಧಿ ಪಾತ್ರದ ಶೂಟಿಂಗ್‌ ಮಾತ್ರ ಮುಕ್ತಾಯ ಆಗಿದೆ. ಆದರೆ ಚಿತ್ರೀಕರಣ ಇನ್ನೂ ಬಾಕಿ ಇದೆ. ಹಾಗಾಗಿ ಇಡೀ ಚಿತ್ರದ ಶೂಟಿಂಗ್‌ ಮುಕ್ತಾಯ ಎಂದು ಹೇಳಲಾಗಿಲ್ಲ. ಹಾಗಾಗಿ ಯಶ್‌ ಅವರ ಭಾಗದ ಚಿತ್ರೀಕರಣ ಇನ್ನೂ ಬಾಕಿ ಇರುವ ಹಾಗೆ ಇದೆ. ಈ ಹಿಂದೆ ಕ್ಲೈಮ್ಯಾಕ್ಸ್‌ ಚಿತ್ರೀಕರಣವನ್ನು ಮುಗಿಸಿದ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಪೋಸ್ಟ್‌ ಹಂಚಿಕೊಂಡಿದ್ದರು. ಇನ್ನೂ ಇತ್ತೀಚೆಗೆ ಸಂಜಯ್‌ ದತ್‌ ಚಿತ್ರದ ಡಬ್ಬಿಂಗ್‌ ಮುಗಿಸಿದ್ದಾರೆ. ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಕೆಜಿಎಫ್ ಕೆಲಸಗಳು ವೇಗವಾಗಿ ಸಾಗುತ್ತಿವೆ. 2022 ಏಪ್ರಿಲ್‌ 14ಕ್ಕೆ KGF2 ತೆರೆಗೆ! ಎಲ್ಲವು ಅಂದುಕೊಂಡ ಹಾಗೆ ನಡೆದಿದ್ದರೆ. ಈ ಚಿತ್ರ ಇದೆ ವರ್ಷ ಜೂನ್‌ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಚಿತ್ರದ ಕೆಲಸಗಳು ತಡವಾಗಿದ್ದು, 2022 ಏಪ್ರಿಲ್ 14ಕ್ಕೆ ಕೆಜಿಎಫ್ ಚಿತ್ರ ರಿಲೀಸ್ ದಿನಾಂಕವನ್ನು ನಿಗದಿ ಮಾಡಿ ಕೊಂಡಿದೆ. ಚಿತ್ರದ ರಿಲೀಸ್‌ಗೆ ಇನ್ನೂ ಮೂರು ತಿಂಗಳು ಮಾತ್ರ ಬಾಕಿ ಇದೆ. ಸದ್ಯ ನಾಯಕ ನಟಿಯ ಭಾಗದ ಸಂಪೂರ್ಣ ಕೆಲಗಳು ಮುಗಿದಿದೆ. ಇನ್ನೂ ಒಂದಷ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಲ್ಲಿ ಚಿತ್ರ ತಂಡ ನಿರತವಾಗಿದೆ.