ನಟಿ ಜಾಕ್ವೆಲಿನ್ ಗೆ ಜೈಲಿನಿಂದಲೇ ಮತ್ತೊಂದು ಪ್ರೇಮಪತ್ರ ಬರೆದ ವಂಚಕ ಸುಕೇಶ್..!

ನಟಿ ಜಾಕ್ವೆಲಿನ್ ಗೆ ಜೈಲಿನಿಂದಲೇ ಮತ್ತೊಂದು ಪ್ರೇಮಪತ್ರ ಬರೆದ ವಂಚಕ ಸುಕೇಶ್..!

ಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಖೇಶ್ ಚಂದ್ರಶೇಖರ್ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೇಮ ಪತ್ರ ಬರೆದಿದ್ದಾನೆ. ಅದರಲ್ಲಿ ಆತ ಜಾಕ್ವೆಲಿನ್ ಅವರನ್ನು ಗೊಂಬೆ ಎಂದೂ ಉಲ್ಲೇಖಿಸಿದ್ದಾನೆ.

ನನ್ನ ಹುಟ್ಟುಹಬ್ಬದ ದಿನದಂದು ನೀನು ತುಂಬಾ ನೆನಪಾಗುತ್ತಿದ್ದೀಯಾ ಎಂದು ಹೇಳಿರುವ ಸುಖೇಶ್ ಚಂದ್ರಶೇಖರ್, ನನ್ನ ಕುರಿತು ನಿನಗಿರುವ ಪ್ರೀತಿ ಅಂತ್ಯವಿಲ್ಲದ್ದು. ನೀನು ಮತ್ತು ನಿನ್ನ ಪ್ರೀತಿ ನನಗೆ ದೊರೆತಿರುವ ಅತ್ಯಂತ ದೊಡ್ಡ ಉಡುಗೊರೆ ಎಂದು ಹೇಳಿಕೊಂಡಿದ್ದಾನೆ.

ಈ ಹಿಂದೆ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೇಮ ಪತ್ರ ಬರೆದಿದ್ದ ಸುಖೇಶ್, ಈಗ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಮತ್ತೊಂದು ಪತ್ರ ಬರೆದಿದ್ದಾನೆ. ಸುಖೇಶ್ ಚಂದ್ರಶೇಖರ್ ವಂಚನಾ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜಾಕ್ವೆಲಿನ್ ಅಂತರ ಕಾಯ್ದುಕೊಳ್ಳುತ್ತಿದ್ದು, ಸುಖೇಶ್ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.