ಹಬ್ಬಕ್ಕೂ ಮುನ್ನ ಮುಗಿಲು ಮುಟ್ಟಿದ ಹೂವು - ಹಣ್ಣುಗಳ ಬೆಲೆ.! ಖರೀದಿದಾರರು ಕಂಗಾಲು

ಹಬ್ಬಕ್ಕೂ ಮುನ್ನ ಮುಗಿಲು ಮುಟ್ಟಿದ ಹೂವು - ಹಣ್ಣುಗಳ ಬೆಲೆ.! ಖರೀದಿದಾರರು ಕಂಗಾಲು

ಬೆಂಗಳೂರು: ಹಬ್ಬಗಳು ಬಂದ್ರೆ ಸಾಕು ಹೂವು ಹಾಗೂ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತವೆ. ಇದೀಗ ದಸರಾ ಹಬ್ಬದ ಹಿನ್ನಲೆಯಲ್ಲಿ ಹೂ, ಹಣ್ಣು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳ್ತಾ ಇದೆ.

ಹೌದು, ಆಯುಧ ಪೂಜೆಗೆ ಇನ್ನೊಂದೇ ದಿನ ಬಾಕಿ ಇದೆ. ಒಂದು ದಿನ ಬಾಕಿ ಇರುವಾಗಲೇ ಹೂ, ಹಣ್ಣು, ಪೂಜೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನು ದರ ಏರಿಕೆ ಆಗುತ್ತೆ ಅಂತ ಇಂದೇ ಖರೀದಿಗೆ ಮುಂದಾಗಿದ್ದಾರೆ.

ಮಲ್ಲಿಗೆ ಕೆಜಿಗೆ 1000 ಸಾವಿರ ರೂಪಾಯಿ ಆದ್ರೆ, ಸೇವಂತಿಗೆ 300-500 ರೂಪಾಯಿಯಾಗಿದೆ. ಚೆಂಡು ಹೂ 150 ರೂ, ಕನಕಾಂಬರ 3 ಸಾವಿರ, ಸುಗಂಧರಾಜ 400 ರೂ., ಕಾಕಡ 700-800 ರೂ. ಇದೆ.

ಇನ್ನು ಈ ಹಬ್ಬಕ್ಕೆ ಕುಂಬಳಕಾಯಿ ಮುಖ್ಯವಾದದ್ದು. ಇದು ಕೆಜಿಗೆ 35 ರಿಂದ 40 ರೂಪಾಯಿ ಆಗಿದೆ. ಬಾಳೆ ಕಂಬ ಎರಡಕ್ಕೆ 150 ರೂಪಾಯಿ ಆಗಿದೆ. ಇನ್ನು ಈ ವರ್ಷ ಹಲವೆಡೆ ಭಾರೀ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಇಂದೇ ಇಷ್ಟು ದರ ಏರಿಕೆಯಾಗಿದ್ದು, ಹಬ್ಬದ ದಿನ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.