ಮನರಜನೆ ನೀಡಿದ ಕಾರ್ ರೇಸ್ ಸ್ಪರ್ಧೆ | Bangalore | CAR |

ಮಹದೇವಪುರ ಯುನೈಟ್ ಆಫ್ ರೋಡ್ ಪಾರ್ಕ್ನಲ್ಲಿ ಆಯೋಜಿಸಿದ್ದ ಕಾರ್ ರೇಸ್ ಸ್ಪರ್ಧೆ ಸ್ಥಳೀಯ ನಿವಾಸಿಗಳಿಗೆ ಮನರಂಜನೆ ಒದಗಿಸಿತು ಎಂದು ಕೋಲಾರ ಜಿಲ್ಲಾ ಪ್ರಭಾರಿ, ಬಿಜೆಪಿ ಮುಖಂಡ ಜಯಚಂದ್ರರೆಡ್ಡಿ ತಿಳಿಸಿದರು. ಕ್ಷೇತ್ರದ ಗುಂಜೂರು - ಬಳಗೆರೆ ರಸ್ತೆಯ ಯುನೈಟ್ ಆಫ್ ರೋಡ್ ಪಾರ್ಕ್ನಲ್ಲಿ ಯುನೈಟ್ ಮೋಟಾರ್ ಸ್ಪೋರ್ಟ್ಸ್ ಮತ್ತು ಚೇತನ್ ಶಿವರಾಂ ಮೋಟಾರ್ ಸ್ಪೋರ್ಟ್ಸ್ ಸಹಭಾಗಿತ್ವದಲ್ಲಿ ಆಟೋಕ್ರಾಸ್ ಫಾಸ್ಟೆಟ್ ಡ್ರೈವರ್ಸ್ ಎಂಬ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಸ್ಪರ್ಧೆಯಲ್ಲಿ ರಾಜ್ಯದ ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಭಾಗಹಿಸಿದ್ದರು. ಯುನೈಟ್ ಸ್ಪೋರ್ಟ್ಸ್ ಮುಖ್ಯಸ್ಥ ನಿಕಿಲ್, ಕ್ಷೇತ್ರದ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ರಾಜಾರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಚನ್ನಸಂದ್ರ ಚಂದ್ರಶೇಖರ್ ಭಾಗವಹಿಸಿದ್ದರು.