ಭಾರತಿ ವಿಷ್ಣುವರ್ಧನ್ ಅವರ ಸಾಕ್ಷ್ಯ ಚಿತ್ರದ ಪ್ರೀಮಿಯರ್ ಶೋ
ಭಾರತಿ ವಿಷ್ಣುವರ್ಧನ್ ಅವರ ಸಾಕ್ಷ್ಯ ಚಿತ್ರದ ಪ್ರೀಮಿಯರ್ ಶೋ
ಬೆಂಗಳೂರು: ಪದ್ಮಶ್ರೀ ಪುರಸ್ಕೃತರಾದ ಡಾ.ಭಾರತಿ ವಿಷ್ಣುವರ್ಧನ್ ಸಾಕ್ಷ್ಯ ಚಿತ್ರದ ಪ್ರೀಮಿಯರ್ ಪ್ರದರ್ಶನ ಇಂದು ಸಂಜೆ ಗರುಡಾ ಮಾಲ್‌ನಲ್ಲಿ ಆಯೋಜಿಸಲಾಗಿದೆ. ಕೀರ್ತಿ ಇನೋವೇಷನ್ ಅರ್ಪಿಸುವ ಬಾಳೇ ಬಂಗಾರ ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್ ಅವರ ಸಾಕ್ಷ್ಯ ಚಿತ್ರಕ್ಕೆ ಗುರುಕಿರಣ್ ಹಿನ್ನೆಲೆ ಗಾಯನ ನೀಡಿದ್ದಾರೆ.
ಸಾಕ್ಷ್ಯಚಿತ್ರದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ , ನಿರ್ದೇಶನವನ್ನು ಸಂಪೂರ್ಣವಾಗಿ ಅನಿರುದ್ಧ್ ಅವರು ನಿರ್ವಹಿಸಿದ್ದು, ನಗರದ ಮ್ಯಾಷರತ್ ರಸ್ತೆಯಲ್ಲಿರುವ ಗರುಡಾಮಾನಲ್ಲಿ ಪ್ರೀಮಿಯರ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ದಕ್ಷ ಮೀಡಿಯಾದ ಸಂಕಲನ, ಕರಿ ಸುಬ್ಬು ಸ್ಟುಡಿಯೋಸ್ ಅವರ ಧ್ವನಿ, ಶಿವಕುಮಾರ್ ಅಂಬಲಿ, ಕೆ.ರಾಮು, ಪುಲ್ಲಾ ರೆಡ್ಡಿ, ವಿನೋದ್ ನಾಯ್ಡು ಛಾಯಾಗ್ರಹಣ ಮಾಡಿದ್ದಾರೆ.