ಅಭಿವೃದ್ಧಿಗಿಂತಲೂ ವಿವಾದಗಳಿಂದಲೇ 'ಸದ್ದು' ಮಾಡಿರುವ ಬೆಳಗಾವಿ ಪಾಲಿಕೆ

ಅಭಿವೃದ್ಧಿಗಿಂತಲೂ ವಿವಾದಗಳಿಂದಲೇ 'ಸದ್ದು' ಮಾಡಿರುವ ಬೆಳಗಾವಿ ಪಾಲಿಕೆ

ಅಭಿವೃದ್ಧಿಗಿಂತಲೂ ವಿವಾದಗಳಿಂದಲೇ 'ಸದ್ದು' ಮಾಡಿರುವ ಬೆಳಗಾವಿ ಪಾಲಿಕೆ

ಬೆಳಗಾವಿ: ಭಾಷೆ, ಗಡಿ ವಿಷಯ ಸೇರಿದಂತೆ ಒಂದಿಲ್ಲೊAದು ವಿವಾದದಿಂದ ಸದ್ದು ಮಾಡುತ್ತಲೇ ಬಂದಿರುವ ಇತಿಹಾಸ ಹೊಂದಿರುವ ಇಲ್ಲಿನ ಮಹಾನಗರಪಾಲಿಕೆಯು ಎರಡು ಬಾರಿ ಸೂಪರ್‌ಸೀಡ್ ಕಳಂಕಕ್ಕೆ ಒಳಗಾಗಿದೆ. ಅಭಿವೃದ್ಧಿ ವಿಷಯಕ್ಕಿಂತಲೂ ವಿವಾದಗಳಿಂದಾಗಿಯೇ ರಾಜ್ಯದಾದ್ಯಂತ ಚರ್ಚೆಗೆ ಒಳಗಾಗಿದೆ.
೧೯೮೪ರಲ್ಲಿ ನಗರಸಭೆಯಿಂದ ನಗರಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದ ಈ ಸ್ಥಳೀಯ ಸಂಸ್ಥೆಯು ಮೇಲ್ದರ್ಜೆಗೇರಿದ್ದಕ್ಕೆ ತಕ್ಕಂತೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿಲ್ಲ. ಕನ್ನಡ-ಮರಾಠಿ ಭಾಷಿಕರು ಗದ್ದಲ-ಗಲಾಟೆಯಲ್ಲೇ ತೊಡಗಿದ್ದರಿಂದ, ಪ್ರಗತಿಯ ವಿಷಯ ನಗಣ್ಯ ಎನ್ನುವಂತಾಗಿ ಹೋದದ್ದು ಇತಿಹಾಸದ ಪುಟಗಳನ್ನು ಸೇರಿದೆ. ಈ ನಡುವೆ, ಮತ್ತೊಂದು ಸಾರ್ವತ್ರಿಕ ಚುನಾವಣೆ ಬಂದಿದೆ.

೫೮ ಸದಸ್ಯ ಬಲದ ಈ ಪಾಲಿಕೆಯಲ್ಲಿ ವಿವಿಧ ಭಾಷೆ ಆಧಾರದ ಮೇಲೆ ಗೆದ್ದು ಬರುತ್ತಿದ್ದವರು ತಮ್ಮ ವಿಚಾರಗಳಿಗೆ ಹಾಗೂ ಸಿದ್ಧಾಂತಗಳಿಗೆ ಅಂಟಿಕೊAಡು ಕುಳಿತರೇ ಹೊರತು, ಸಮಗ್ರ ಅಭಿವೃದ್ಧಿಯ ವಿಷಯದಲ್ಲಿ ಒಗ್ಗಟ್ಟಾಗಿ ಹೋರಾಡಲಿಲ್ಲ. ಹೊಸ ಮುಖಗಳು ಆಯ್ಕೆಯಾಗಿ ಹೊಸ ನೀರು ಹರಿದಿದೆಯಾದರೂ ಅವರು ಕೂಡ ವಿವಾದಗಳಿಗೆ ಜೋತು ಬಿದ್ದು, ಅದೇ ಪರಂಪರೆಯನ್ನೇ ಮುಂದುವರಿಸಿದರು. ಇದು ಪ್ರಜ್ಞಾವಂತರ ಅಸಮಾಧಾನಕ್ಕೂ ಕಾರಣವಾಗಿದೆ.

ಪ್ರತಿಪಾದನೆಯಲ್ಲೇ: 'ಗೆದ್ದ ಮರಾಠಿ ಭಾಷಿಕರೆಲ್ಲರೂ ನಮ್ಮವರೆ' ಎಂಬ ಆಧಾರದ ಮೇಲೆ, ರಾಜಕೀಯ ಪಕ್ಷಗಳ ಹೊಂದಾಣಿಕೆ ರಾಜಕಾರಣದ ಏಣಿಯನ್ನೇರಿ ಬಹುಪಾಲು ಅಧಿಕಾರದ ಗದ್ದುಗೆಯಲ್ಲಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ತಮ್ಮ ವಿಚಾರಗಳ ಪ್ರತಿಪಾದನೆಯಲ್ಲಿ ತೊಡಗಿದ್ದೇ ಹೆಚ್ಚು ಎನ್ನುವುದನ್ನು ಇಲ್ಲಿನ ಇತಿಹಾಸ ಪುಟಗಳು ಹೇಳುತ್ತವೆ.

ಈ ಮಹಾನಗರಪಾಲಿಕೆ ತನ್ನ ಇತಿಹಾಸದಲ್ಲಿ ೨ ಬಾರಿ ಸೂಪರ್ ಸೀಡ್ ಶಿಕ್ಷೆಗೆ ಗುರಿಯಾಗಿದೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ; ಸರಿಯಾಗಿ ಸಭೆಗಳನ್ನು ನಡೆಸಲಿಲ್ಲ ಎಂಬ ಕಾರಣಕ್ಕೆ ೨೦೦೫ರಲ್ಲಿ ಎನ್. ಧರಂಸಿAಗ್ ನೇತೃತ್ವದ ಸರ್ಕಾರವಿದ್ದಾಗ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲಾಗಿತ್ತು. ಆಗ ವಿಜಯ ಮೋರೆ ಮೇಯರ್ ಆಗಿದ್ದರು. ೨೦೧೧ರಲ್ಲಿ ಪಾಲಿಕೆಯ ಹಣಕಾಸು ಸ್ಥಿತಿ ಅಧೋಗತಿಗೆ ಹೋಗಿದ್ದರಿಂದ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಪಾಲಿಕೆಯನ್ನು ಸೂಪರ್‌ಸೀಡ್ ಶಿಕ್ಷೆ ಕೊಟ್ಟಿದ್ದರು. ಆಗ ಪಾಲಿಕೆಯಲ್ಲಿದ್ದ ಸದಸ್ಯರು ಮತ್ತು ಅವರ ಸ್ವಾರ್ಥ ರಾಜಕಾರಣವೆ ಸೂಪರ್‌ಸೀಡ್ ಆಗಲು ಮುಖ್ಯ ಕಾರಣವಾಗಿತ್ತು ಎನ್ನಲಾಗಿತ್ತು. ಹೀಗೆ ಸೂಪರ್ ಸೀಡ್ ಆದಾಗಲೆಲ್ಲಾ ಎಂಇಎಸ್ ಬೆಂಬಲಿತರೇ ಮೇಯರ್ ಆಗಿದ್ದರು.

ವಿವಾದಕ್ಕೆ ಗುರಿಯಾಗಿದ್ದರು: ವಿಜಯ ಮೋರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಡಿ ವಿವಾದ ಕುರಿತು ನಿರ್ಣಯ ಅಂಗೀಕರಿಸಿ ವಿವಾದಕ್ಕೆ ಗುರಿಯಾಗಿದ್ದರು. ಅಭಿವೃದ್ಧಿಯಲ್ಲಿ ನಿರ್ಲಕ್ಷ ಮತ್ತು ಸರ್ಕಾರದಿಂದ ನೀಡಲಾದ ಅನುದಾನದ ಬಳಕೆಯಲ್ಲಿ ವಿಫಲ ಎಂಬ ಕಾರಣಗಳನ್ನು ಮುಂದಿಟ್ಟುಕೊAಡು ಪಾಲಿಕೆಯನ್ನೇ ವಿಸರ್ಜಿಸುವ ಮೂಲಕ (ಸೂಪರ್‌ಸೀಡ್) ಸದಸ್ಯರಿಗೆ ಬುದ್ಧಿ ಕಲಿಸಿತ್ತು. ೨೦೧೧ರಲ್ಲಿ ಸೂಪರ್ ಸೀಡ್ ಆದಾಗ ಮಂದಾ ಬಾಳೇಕುಂದ್ರಿ ಪ್ರಥಮಪ್ರಜೆಯಾಗಿದ್ದರು.

೨೦೧೫ರಲ್ಲಿ ೩ನೇ ಬಾರಿಗೆ ಸೂಪರ್‌ಸೀಡ್ ಆಗುವ ಪರಿಸ್ಥಿತಿ ಎದುರಾಗಿತ್ತು. ಆಗ, ಎಂಇಎಸ್ ಬೆಂಬಲಿತ ಸದಸ್ಯೆ ಸರಿತಾ ಪಾಟೀಲ ಮೇಯರ್ ಆಗಿದ್ದರು. ಅವರು ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್‌ನವರು ನಡೆಸಿದ ಕರಾಳ ದಿನಾಚರಣೆಯಲ್ಲಿ ಮೆರವಣಿಗೆಯಲ್ಲೂ ಪಾಲ್ಗೊಂಡಿದ್ದರು. ಇದೆಲ್ಲವನ್ನೂ ಪರಿಗಣಿಸಿ, ಸೂಪರ್‌ಸೂಡ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಕೆಲವು ಕನ್ನಡಪರ ಹೋರಾಟಗಾರರ ಸಲಹೆಯ ಮೇರೆಗೆ ಸರ್ಕಾರ ಹಿಂದೆ ಸರಿದಿತ್ತು.

ಈ ಬಾರಿ, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಚಿಹ್ನೆಯ ಮೇಲೆ ಕಣಕ್ಕಿಳಿದಿರುವುದು ಎಂಇಎಸ್‌ಗೆ ಹೊಡೆತ ನೀಡಿದೆ. ಗೆಲ್ಲುವ ಮರಾಠಿ ಭಾಷಿಕರು ನಮ್ಮವರು ಎಂದು ಹೇಳಿಕೊಳ್ಳುವುದಕ್ಕೆ ಆ ಸಂಘಟನೆಯವರಿಗೆ ಅವಕಾಶ ಇಲ್ಲದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.