ಬಿಜೆಪಿಯಿಂದ ಮಹತ್ವದ ನಿರ್ಧಾರ; ಸೈಲೆಂಟ್ ಸುನೀಲನ ರಾಜಕೀಯ ಕನಸಿಗೆ ಆರಂಭದಲ್ಲೇ ವಿಘ್ನ

ಬಿಜೆಪಿ ನಾಯಕರ ಜೊತೆ ಕುಳಿತು ಫೋಸ್ ಕೊಟ್ಟಿದ್ದೇ ತಡ, ಸೈಲೆಂಟ್ ಸುನೀಲ್ನ ರಾಜಕೀಯ ಪ್ರವೇಶ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕದನದ ಕಿಚ್ಚಿಗೆ ಸೈಲೆಂಡ್ ಸುನೀಲನ ವಿಷಯಗಳು ತುಪ್ಪದಂತೆ ಬೀಳ್ತಿದ್ದು, ನಾಯಕರ ಬೀದಿ ಕಾಳಗ ತಾರಕಕ್ಕೇರುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಸೈಲೆಂಡ್ ಸುನೀಲ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ರೌಡಿ ಶೀಟರ್ ಸೈಲೆಂಡ್ ಸುನೀಲ ಬಿಜೆಪಿ ಸೇರ್ಪಡೆಗೆ ಸಿದ್ಧವಾಗ್ತಿದ್ದರಿಂತೆಯೇ ಕಾಂಗ್ರೆಸ್ಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ಇದರೊಂದಿಗೆ ಸೈಲೆಂಟ್ ಆಗಿ ಬಿಜೆಪಿ ಸೇರಲು ಮುಂದಾಗಿದ್ದ ಸೈಲೆಂಟ್ ಸುನೀಲನ ರಾಜಕೀಯ ವಿಘ್ನ