ಬೆಂಗಳೂರು ಹಿಟ್ & ರನ್ ಕೇಸ್ : ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ : ಸಚಿವ ವಿ.ಸೋಮಣ್ಣ
ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ದನನ್ನು ಅಮಾನುಷವಾಗಿ ಎಳೆದೊಯ್ದ ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗಾಯಾಳು ಮುತ್ತಪ್ಪ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಅಮಾನವೀಯ ಘಟನೆ ವರದಿಯಾಗಿದ್ದು, ರಸ್ತೆಯಲ್ಲಿ ವ್ಯಕ್ತಿಯನ್ನು ಬೈಕ್ ಸವಾರ 1 ಕಿ.ಮೀ ಧರಧರನೇ ಎಳೆದೊಯ್ದ ಭೀಕರ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ. ಮುತ್ತಪ್ಪಗೆ ಎಕ್ಸ್ ರೇ ಮಾಡಿದ್ದೇವೆ, ಯಾವುದೇ ಗಂಭೀರ ತೊಂದರೆ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಏನಿದು ಘಟನೆ
ಒನ್ ವೇಯಲ್ಲಿ ಬಂದ ಬೈಕ್ ಸವಾರನೊಬ್ಬ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದಾನೆ . ನಂತರ ಕೆಳಗೆ ಇಳಿದ ಟಾಟಾ ಸುಮೋ ಚಾಲಕ ಬೈಕ್ ಸವಾರರನ್ನು ಪ್ರಶ್ನಿಸಿ ಹಿಡಿಯಲು ಮುಂದಾಗಿದ್ದಾನೆ. ಟಾಟಾ ಸುಮೋ ಚಾಲಕ ಬೈಕ್ ಗೆ ಜೋತು ಹಾಕಿಕೊಂಡಿದ್ದು, ಅದನ್ನು ನೋಡಿದರೂ ನೋಡದ ಹಾಗೆ ಬೈಕ್ ಸವಾರ ಆತನನ್ನು ಧರನೇ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಮಾಗಡಿ ರಸ್ತೆ ಟೋಲ್ ಗೇಟ್ ನಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೂ ಎಳೆದೊಯ್ದಿದ್ದಾನೆ. ಬರೋಬ್ಬರಿ 1 ಕೀಮೀ ವಾಹನ ಸವಾರರನನ್ನು ಬೈಕ್ ಸವಾರ ಎಳೆದುಕೊಂಡು ಹೋಗಿದ್ದಾನೆ. ಅಲ್ಲದೇ ಹೇಗೆ ಬೇಕೋ ಹಾಗೇ ಬೈಕ್ ಸವಾರ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಡ್ರೈವರ್ ಕೈ ಕಾಲ ತರಚಿದ್ರೂ ಬಿಡಲಿಲ್ಲ..ಈ ರೀತಿಯಾಗಿ ಬೆಂಗಳೂರಿನಲ್ಲಿ ಬೈಕ್ ಸವಾರನ ಮೃಗೀಯ ವರ್ತನೆ ತೋರಿದ್ದಾನೆ.
ಸ್ಥಳೀಯರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದ್ದು, ನಿಜಕ್ಕೂ ಬಹಳ ಭಯಾನಕಾರಿಯಾಗಿದೆ. ನಂತರ ಸಾರ್ವಜನಿಕರು ಬೈಕ್ ಸವಾರರನಿಗೆ ಧರ್ಮದೇಟು ನೀಡಿದ್ದಾರೆ. ನಂತರ ಸ್ಥಳಕ್ಕೆ ಆಂಬುಲೆನ್ಸ್ ಬಂದಿದ್ದು, ಗಾಯಗೊಂಡ ಟಾಟಾ ಸುಮೋ ಸವಾರ ಹಾಗೂ ವ್ಯಕ್ತಿ ಎಳೆದೊಯ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.