ಸುಶಾಂತ್ ಸಾವಿನ 3 ವರ್ಷಗಳ ಬಳಿಕ ನೆಚ್ಚಿನ ನಾಯಿ ಫಡ್ಜ್ ಸಾವು

ಸುಶಾಂತ್ ಸಾವಿನ 3 ವರ್ಷಗಳ ಬಳಿಕ ನೆಚ್ಚಿನ ನಾಯಿ ಫಡ್ಜ್ ಸಾವು

ವದೆಹಲಿ: ಬಾಲಿವುಡ್‍ನ ಖ್ಯಾತ ನಟ ಸುಶಾಂತ ಸಿಂಗ್‌ ರಜಪೂತ್‌ ಸಾವನ್ನಪ್ಪಿ 3 ವರ್ಷಗಳೇ ಕಳೆದಿವೆ. ಆದರೆ ನಟನ ನೆನಪು ಮಾತ್ರ ಇಂದಿಗೂ ಹಾಗೇ ಇದೆ. ಪ್ರತಿಭಾವಂತ ನಟನ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಇತ್ತೀಚೆಗಷ್ಟೇ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವ್ಯಕ್ತಿ ರೂಪ್‌ ಕುಮಾರ್ ಶಾ ಸ್ಫೋಟಕ ಮಾಹಿತಿ ಬಹಿರಂಗಪಡಸಿದ್ದರು.

ಏನೇ ಆಗಲಿಬಾಲಿವುಡ್‍ನ ಟ್ಯಾಲೆಂಟೆಡ್ ನಟನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೆನಿಸುತ್ತಿದೆ. ಸಿಂಪಲ್ ಆಗಿದ್ದ ನಟ ಎಲ್ಲರ ಕಷ್ಟ ಮತ್ತು ಭಾವನೆಗಳಿಗೆ ಸ್ಪಂದಿಸುವ ಹೃದಯ ಶ್ರೀಮಂತಿಕೆ ಹೊಂದಿದ್ದರು. ಆದರೆ ಅದ್ಭುತ ವ್ಯಕ್ತಿತ್ವದ ನಟ ಅಕಾಲಿಕವಾಗಿ ಸಾವನ್ನಪ್ಪಿದ್ದು ದುರಾದೃಷ್ಟವೇ ಸರಿ.

ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸುಶಾಂತ್ ಸಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಸ್ಪಷ್ಟ ನಿದರ್ಶನವೇ ಸುಶಾಂತ್‌ ಅವರ ಮುದ್ದಿನ ಶ್ವಾನ ಫಡ್ಜ್.‌ ಈ ಶ್ವಾನ ಸುಶಾಂತ್‌ ಸಾವಿನ ನಂತರ ಮಾನಸಿಕವಾಗಿ ಅನಾರೋಗ್ಯದಿಂದ ಬಳಲುತ್ತಿತ್ತು. ಸುಶಾಂತ್‍ ಹೆಚ್ಚು ಪ್ರೀತಿಸುತ್ತಿದ್ದ ಆ ನಾಯಿಗೆ ಅವರಿಲ್ಲದ ಮನೆ-ಜಾಗ ಎಲ್ಲವೂ ಬೇಡವೆನಿಸಿತ್ತೋ ಏನೋ? ಹೀಗಾಗಿ ತನ್ನ ಮಾಲೀಕನ ನೆನಪಿನಲ್ಲಿ ಕೊರಗಿ ಕೊರಗಿ ಅನಾರೋಗ್ಯಕ್ಕೀಡಾಗಿತ್ತು. ಸುಶಾಂತ್‌ ಸಾವಿನ 3 ವರ್ಷಗಳ ನಂತರ ಅವರ ಫೇವರೆಟ್‌ ಶ್ವಾನವೂ ಇಹಲೋಕ ತ್ಯೆಜಿಸಿದೆ. ಇದು ಸುಶಾಂತ್ ಅವರ ಲಕ್ಷಾಂತರರ ಅಭಿಮಾನಿಗಳಿಗೆ ನೋವು ತಂದಿದೆ. ಸುಶಾಂತ್‌ ಅವರ ನಾಯಿ ಸಾವನ್ನಪ್ಪಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಶಾಂತ್‌ ಸಹೋದರಿ ಫಡ್ಜ್‌ ಜೊತೆಗೆ ಸುಶಾಂತ್‌ ಇರುವ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇನ್ನೂ ಕೆಲವೇ ತಿಂಗಳುಗಳಲ್ಲಿಸುಶಾಂತ ಸಿಂಗ್‌ ಬರ್ತ್ ಆನಿವರ್ಸರಿ ಇದೆ. ಅವರ ಸಾವಿನ ಸುದ್ದಿಯನ್ನು ಕೇಳಿದ ಎಷ್ಟೋ ಅಭಿಮಾನಿಗಳು ಇಂದಿಗೂ ಜೂನ್‌ ತಿಂಗಳನ್ನು ದ್ವೇಷಿಸುತ್ತಿದ್ದಾರೆ. ಯಾವುದೇ ಆಡಂಬರವಿಲ್ಲದ ಸರಳತೆಯಿಂದ ಬದುಕುತ್ತಿದ್ದ ಮನ್ನಷ್ಯನನ್ನು ಕಳೆದುಕೊಂಡಿರುವ ದುಃಖ ಮರೆಯುವಷ್ಟರಲ್ಲೇ ಶ್ವಾನ ಸಾವನ್ನಪ್ಪಿರುವ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಿಗೆ ಇನ್ನಷ್ಟು ಬೇಸರ ಮೂಡಿಸಿದೆ.