ಕಂಪೆನಿಯ ಕೃತ್ಯಗಳಲ್ಲಿ ಉದ್ಯೋಗಿ ಮಾತ್ರ ಆರೋಪಿಯಲ್ಲ: ಹೈಕೋರ್ಟ್

ಬೆಂಗಳೂರು: ಕದ್ದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪೆನಿಯ ಇಬ್ಬರು ಉದ್ಯೋಗಿಗಳ ವಿರುದ್ಧ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ. ಕಂಪೆನಿಯನ್ನು ಕೈಬಿಟ್ಟು ಉದ್ಯೋಗಿಗಳನ್ನು ಮಾತ್ರ ಆರೋಪಿಯಾನ್ನಾಗಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟು ಚಾರ್ಜ್ಶೀಟ್ ಅನ್ನು ರದ್ದುಗೊಳಿಸಿ ಆದೇಶಿಸಿದೆ.