ಕಾನೂನು ನಿಯಮದಂತೆ ಟೋಲ್‌ ತೆರವು: ನಳಿನ್‌ ಕುಮಾರ್‌ ಕಟೀಲು

ಕಾನೂನು ನಿಯಮದಂತೆ ಟೋಲ್‌ ತೆರವು: ನಳಿನ್‌ ಕುಮಾರ್‌ ಕಟೀಲು

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದ್ದು, ನಮ್ಮದೇನು ಅಭ್ಯಂತರವಿಲ್ಲ. ಕಾನೂನು ನಿಯಮದಡಿ ನಾವು ಟೋಲ್‌ ತೆರವು ಮಾಡುತ್ತೇವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಆಡಳಿತದಲ್ಲಿದ್ದಾಗ ಟೋಲ್‌ಗೇಟ್‌ ತೆರವು ಮಾಡದವರು ಈಗ ಹೋರಾಟ ಮಾಡುತ್ತಿರುವುದು ರಾಜಕೀಯ ನಾಟಕ.

ಆಸ್ಕರ್‌ ಫೆರ್ನಾಂಡಿಸ್‌ ಕೇಂದ್ರ ಸಚಿವರಾಗಿದ್ದ ವೇಳೆ ಅವರು ಏಕೆ ಮನವಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

ತೂಗು ಸೇತುವೆಗಳ ಪರಿಶೀಲನೆ
ಗುಜರಾತ್‌ನ ಮೊರ್ಬಿಯದಲ್ಲಿ ಕೇಬಲ್‌ ಬ್ರಿಜ್‌ ಕುಸಿತ ಎಚ್ಚರಿಕೆಯಾಗಿದ್ದು, ಜಿಲ್ಲೆಯಾದ್ಯಂತ ಇರುವ ಹಳೆಯ ತೂಗು ಸೇತುವೆಗಳನ್ನು ತಂತ್ರಜ್ಞರಿಂದ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಳಿನ್‌ ಹೇಳಿದರು.