'ಖಾಸಗಿ ಶಾಲೆ'ಗಳಿಗೆ 'ಶುಲ್ಕ ನಿಗದಿ'ಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ - ಹೈಕೋರ್ಟ್

'ಖಾಸಗಿ ಶಾಲೆ'ಗಳಿಗೆ 'ಶುಲ್ಕ ನಿಗದಿ'ಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ - ಹೈಕೋರ್ಟ್

ಬೆಂಗಳೂರು: ಖಾಸಗೀ ಶಾಲೆಗಳು ( Privet School ) ವಿಧಿಸುವಂತ ಶುಲ್ಕದ ಬಗ್ಗೆ ಸರ್ಕಾರವು ಶಾಲಾ ಶುಲ್ಕ ನಿಗಧಿ ಪಡಿಸುವಂತ ಅಧಿಕಾರವಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ನೀಡಿದೆ.

ಕರ್ನಾಟಕ ಹೈಕೋರ್ಟ್ ಗೆ, ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ, ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್ ಏಕ ಸದಸ್ಯ ಪೀಠವು ನಡೆಸಿತು.

ಶಾಲಾ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷಿ ವಿಧಿಸುವಂತಿಲ್ಲ ಎಂಬುದಾಗಿ ಹೇಳಿತು. ಅಲ್ಲದೇ ಹೀಗೆ ಶಿಕ್ಷೆ ವಿಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 2(11)ಎ ವಿಧಿಗೆ ವಿರುದ್ಧವಾಗಿದೆ. ಅಲ್ಲದೇ ಸಂವಿಧಾನದ 14ನೇ ವಿಧಿಯ ವಿರುದ್ಧವಾಗಿದೆ ಎಂಬುದಾಗಿ ಹೇಳಿತು.

ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಸಹ ಕಾನೂನು ಬಾಹಿರವಾಗಿದೆ ಎಂಬುದಾಗಿ ಹೇಳುವ ಮೂಲಕ ಖಾಸಗಿ ಅನುದಾನಿತ ಶಾಲೆಗಳಿಗೆ ಬಿಗ್ ರಿಲೀಫ್ ಅನ್ನು ಹೈಕೋರ್ಟ್ ನೀಡಿದೆ.