24 ಗಂಟೆಗಳಲ್ಲಿ 10,929 ಮಂದಿಗೆ ಕೊರೋನಾ, ಮತ್ತಷ್ಟು ಕುಸಿದ ಸೋಂಕಿತರ ಸಂಖ್ಯೆ

24 ಗಂಟೆಗಳಲ್ಲಿ 10,929 ಮಂದಿಗೆ ಕೊರೋನಾ, ಮತ್ತಷ್ಟು ಕುಸಿದ ಸೋಂಕಿತರ ಸಂಖ್ಯೆ

ನವದೆಹಲಿ, ನ.6- ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 10,929 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 12 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಚೇತರಿಕೆ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.46 ಲಕ್ಷಕ್ಕೆ ಇಳಿಕೆಯಾಗಿದ್ದು, ಸೋಂಕಿನಿಂದ 392 ಸಾವುಗಳು ಸಂಭವಿಸಿವೆ.ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 12,509 ಮಂದಿ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಚೇತರಿಕೆ ಪ್ರಮಾಣ ಶೇ.98.23ರಷ್ಟು ಆಗಿದೆ. ದೇಶದಲ್ಲಿ ಕೋವಿಡ್-19 ಒಟ್ಟು ಸಕ್ರಿಯ ಪ್ರಕರಣಗಳು 1,46,950ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಐಸಿಎಂಆರ್ ಪ್ರಕಾರ ನವೆಂಬರ್ 5ರ ವರೆಗೆ 61,39,65,751 ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಈವರೆಗೆ 6,40,265 ಆಗಿದೆ. ಈ ನಡುವೆ ಕೇರಳದಲ್ಲಿ ನಿನ್ನೆ 6580 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 46 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಪೀಡಿತರ ಸಂಖ್ಯೆ 50,01,835ಕ್ಕೆ ಏರಿಕೆಯಾಗಿದೆ.