ಲೋಕಸಭಾ ಚುನಾವಣೆಯ ಯುದ್ಧಕ್ಕೆ ಈಗ್ಲೇ ಸಜ್ಜಾಗಿ; 400 ದಿನಕ್ಕೆ ಸ್ಪೆಷಲ್ ಟಾಸ್ಕ್ ಕೊಟ್ಟ ಮೋದಿ
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಈಗಲೇ ಸಜ್ಜಾಗುವಂತೆ ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಇನ್ನು 400 ದಿನಗಳು ಮಾತ್ರವೇ ಬಾಕಿ ಇದೆ. ನಾವು ಕಠಿಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಾರದು. ಟಾಪ್ ಗೇರ್‌ನಲ್ಲೇ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಸೂಚನೆ ಕೊಟ್ಟಿದ್ದಾರೆ.
ಬೂತ್ ಮಟ್ಟದ ಸಂಘಟನೆ
ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ. ವೋಟಿನ ಬಗ್ಗೆ ಚಿಂತೆ ಬೇಡ, ದೇಶದ ಬಗ್ಗೆ ಚಿಂತೆ ಮಾಡಿ. ಬಿಜೆಪಿ ಸಾಮಾಜಿಕ, ಆರ್ಥಿಕ ಬದಲಾವಣೆಗಾಗಿ ಕೆಲಸ ಮಾಡ್ತಿದೆ. ಎಲ್ಲಾ ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕು. ಜನರೊಂದಿಗೆ ತಳಮಟ್ಟದ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಸ್ಲಿಂರನ್ನು ಭೇಟಿಯಾಗಿ
ಎಲ್ಲಾ ಸಮಾಜದ ದುರ್ಬಲ ವರ್ಗದ ಜನರನ್ನು ತಲುಪಿ ಮಾತನಾಡಿಸಬೇಕು. ರಾಜಕೀಯವಲ್ಲ, ಸಮಾಜದ ಬಗ್ಗೆ ಚಿಂತೆ ಮಾಡಿ.
ದೇಶದ ಮುಸ್ಲಿಮರನ್ನು ನಿರಂತರವಾಗಿ ಭೇಟಿಯಾಗಿ ಮಾತುಕತೆ ನಡೆಸಿ. ಅದರಲ್ಲೂ ಉತ್ತರಪ್ರದೇಶದ ಪಸಮಂದ್ ಮುಸ್ಲಿಮರನ್ನು ಭೇಟಿಯಾಗಿ ಮಾತುಕತೆ ನಡೆಸಿ. ಜನರ ಮಧ್ಯೆ ಹೋಗಿ ವೋಟಿನ ಮಹತ್ವ ತಿಳಿಸಿ ಎಂದು ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ