40 ಹೋಟೆಲ್‌ಗಳು ಮುಚ್ಚಲು ಕಾರಣವಾಯ್ತು ಒಬ್ಬ ನರ್ಸ್ ಸಾವು: ಕೇರಳದಲ್ಲಿ ಫುಡ್ ಜಾಯಿಂಟ್‌ಗಳ ಮೇಲೆ ತೀವ್ರಗೊಂಡ ದಾಳಿ

40 ಹೋಟೆಲ್‌ಗಳು ಮುಚ್ಚಲು ಕಾರಣವಾಯ್ತು ಒಬ್ಬ ನರ್ಸ್ ಸಾವು: ಕೇರಳದಲ್ಲಿ ಫುಡ್ ಜಾಯಿಂಟ್‌ಗಳ ಮೇಲೆ ತೀವ್ರಗೊಂಡ ದಾಳಿ

ತಿರುವನಂತಪುರಂ, ಡಿಸೆಂಬರ್‌ 4: ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದು ದಿನದ ನಂತರ ಕೇರಳದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ 40 ಹೋಟೆಲ್‌ಗಳನ್ನು ಬಂದ್ ಮಾಡಿ, 62 ಮಂದಿಗೆ ದಂಡ ವಿಧಿಸಿದ್ದಾರೆ.

ರಾಜ್ಯಾದ್ಯಂತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 28 ಮಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾರೂಢ ಸಿಪಿಐ(ಎಂ) ನ ಯುವ ಸಂಘಟನೆಯ ಸದಸ್ಯರು ಕೊಟ್ಟಾಯಂನ 'ಹೋಟೆಲ್ ಪಾರ್ಕ್' ಮೇಲೆ ದಾಳಿ ನಡೆಸಿದರು. ಅಲ್ಲಿ 33 ವರ್ಷದ ನರ್ಸ್ ರೇಶ್ಮಿ ರಾಜ್ ಅವರು ಡಿಸೆಂಬರ್‌ನಲ್ಲಿ ಅರೇಬಿಯನ್ ಚಿಕನ್ ಡಿಶ್ 'ಅಲ್ ಫಹಮ್' ಅನ್ನು ಆರ್ಡರ್ ಮಾಡಿದ್ದರು. ಅದನ್ನು ತಿಂದ ನಂತರ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ನಿಧನರಾದರು.

ಅದೇ ಹೋಟೆಲ್‌ನಲ್ಲಿ ಊಟ ಮಾಡಿದ ಇತರ 20 ಜನರು ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.