ದಾವೋಸ್‌ನಲ್ಲಿ ನಾಳೆಯಿಂದ ವಿಶ್ವ ಆರ್ಥಿಕ ಶೃಂಗಸಭೆ
ಸ್ವಿಜರ್‌ಲೆಂಡ್‌ನ ದಾವೋಸ್‌ನಲ್ಲಿ ನಾಳೆಯಿಂದ(ಜ. 16ರಿಂದ 20ರ ವರೆಗೆ) ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆ ನಡೆಯಲಿದೆ. ಈ ಬಾರಿ ವಿಘಟಿತ ಜಗತ್ತಿನಲ್ಲಿ ಸಹಕಾರ ಎಂಬ ಥೀಮ್‌ನಡಿ ಶೃಂಗಸಭೆ ನಡೆಯಲಿದೆ. ರಷ್ಯಾ-ಉಕ್ರೇನ್ ಯುದ್ಧದ ಬಿಕ್ಕಟ್ಟು, ಜಾಗತಿಕ ಹಣದುಬ್ಬರ, ಹವಾಮಾನ ಬದಲಾವಣೆಯಂತಹ ಸಮಸ್ಯೆಗಳು & ಪರಿಹಾರಗಳ ಕುರಿತು ತಜ್ಞರು, ಹೂಡಿಕೆದಾರರು, ರಾಜಕೀಯ ಮತ್ತು ವ್ಯಾಪಾರ ಮುಖಂಡರು ಚರ್ಚಿಸುವ ನಿರೀಕ್ಷೆಯಿದೆ.