ವಿರೋಧ ಪಕ್ಷದಲ್ಲಿದ್ದರೂ ಬೊಮ್ಮಾಯಿಗೆ ಸ್ವಾಗತ ಕೋರುತ್ತೇವೆ Hirekerur

ಅಧಿಕಾರ ಹೋಗಬಹುದು, ಮುಖ್ಯಮಂತ್ರಿ ಸ್ಥಾನ ಹೋಗಬಹುದು ಆದರೆ ನೂತನ ಮುಖ್ಯಮಂತ್ರಿ ನಮ್ಮ ಜೆಲ್ಲೆಯವರೇ ಆದ್ದರಿಂದ ಶಾಶ್ವತ ಯೋಜನೆಗಳನ್ನು ಬಸವರಾಜ್ ಬೊಮ್ಮಾಯಿಯವರು ಮಾಡಲಿ ಎಂಬುದು ವಿರೋಧ ಪಕ್ಷದ ನಾಯಕರ ಆಶಯ ಎಂದು ಮಾಜಿ ಶಾಸಕ ಬಿ. ಹೆಚ್. ಬನ್ನಿಕೋಡ್ ಹೇಳಿದರು. ಹಿರೇಕೆರೂರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ತುಂಬಾ ಸಂತೋಷಕರ ವಿಷಯ. ವಿರೋಧ ಪಕ್ಷದಲ್ಲಿದ್ದರೂ ನಾವು ಸ್ವಾಗತ ಕೋರುತ್ತಿರುವುದು ಗಮನಿಸಿದರೆ ಕಾಂಗ್ರೆಸ್ ಪಕ್ಷ ಟೀಕೆ, ಟಿಪ್ಪಣಿ ಮಾಡದೇ ಯಾವುದೇ ಪಕ್ಷ ಆಡಳಿತದಲ್ಲಿರಲಿ ರಾಜ್ಯದ ಅಭಿವೃದ್ಧಿಯಾಗಲಿ ಎಂದು ಆಶಿಸುತ್ತದೆ ಎಂದರು. ಈ ಸಂದರ್ಭದಲ್ಲಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ಕೆ. ಕರಿಯಣ್ಣನವರ, ಬಿ. ಎಂ. ಬಣಕಾರ್, ಮಂಜುನಾಥ್ ತಂಬಾಕದ, ಪಿ. ಡಿ. ಬಸನಗೌಡ, ಮಂಜು ಶಿವನಕ್ಕನವರ್, ವಿನಯ ಪಾಟೀಲ್, ವಾಸಣ್ಣ ದ್ಯಾವಕ್ಕಳವರ್,ಕಪಿಲ್ ದೇವ್ ಪೂಜಾರ, ಕೆಂಚಪ್ಪ ಕುರಿಯವರ ಇದ್ದರು.