ಆ ಪಂದ್ಯದ ನಂತರ ಡು ಪ್ಲೆಸಿಸ್ ಮತ್ತು ಆತನ

ಕ್ರಿಕೆಟ್ ಪಂದ್ಯಗಳು ವೀಕ್ಷಕರ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂದರೆ ಕೆಲವೊಮ್ಮೆ ಈ ಥರದ ಅಭಿಮಾನಿಗಳೂ ಇರುತ್ತಾರಾ ಎನ್ನುವ ಮಟ್ಟಿಗೆ ಕ್ರಿಕೆಟ್ ಅಭಿಮಾನಿಗಳು ಅತಿಯಾಗಿ ವರ್ತಿಸಿಬಿಡುತ್ತಾರೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನೇನೂ ನೀಡದಿದ್ದಾಗ ದ್ರಾವಿಡ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು, ಅಷ್ಟೇ ಯಾಕೆ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಯಾವ ಪಂದ್ಯವನ್ನು ಸೋತರೂ ಸಹ ಪಾಕಿಸ್ತಾನದಲ್ಲಿ ಅಭಿಮಾನಿಗಳು ದೂರದರ್ಶನಗಳನ್ನು ಒಡೆದು ಹಾಕುವುದನ್ನು ನೀವು ನೋಡಿರುತ್ತೀರಿ ಮತ್ತು ಕಳೆದ ಬಾರಿಯ ಐಪಿಎಲ್ ಟೂರ್ನಿ ವೇಳೆ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡಿದಾಗ ಸಾಮಾಜಿಕ ಜಾಲತಾಣದಲ್ಲಿ ಧೋನಿ ಕುಟುಂಬದ ಕುರಿತು ಕೆಳಮಟ್ಟದಲ್ಲಿ ಅಭಿಮಾನಿಗಳು ಟ್ರೋಲ್ ಮಾಡಿದ್ದನ್ನು ಸಹ ನೀವು ನೋಡಿರುತ್ತೀರಿ. ಹೀಗೆ ಅಭಿಮಾನಿಗಳು ತಮ್ಮ ದೇಶ ಮತ್ತೊಂದು ದೇಶದ ವಿರುದ್ಧ ಸೋತಾಗ ಮತ್ತು ತಮ್ಮ ನೆಚ್ಚಿನ ತಂಡ ಸೋತಾಗ ಒಮ್ಮೊಮ್ಮೆ ತೀವ್ರವಾಗಿ ವರ್ತಿಸಿಬಿಡುತ್ತಾರೆ. ಅದರಲ್ಲಿಯೂ ವಿಶ್ವಕಪ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಾಗಂತೂ ಆಟಗಾರರುಗಳಿಗೆ ಜೀವ ಬೆದರಿಕೆಗಳು ಬಂದ ಕೆಲವೊಂದಷ್ಟು ಉದಾಹರಣೆಗಳಿವೆ. ಇದೀಗ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಕೂಡ ತಮಗೆ ಈ ಹಿಂದೆ ಆಗಿದ್ದ ಇದೇ ರೀತಿಯ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ.

ಆ ಪಂದ್ಯದ ನಂತರ ಡು ಪ್ಲೆಸಿಸ್ ಮತ್ತು ಆತನ