ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ಗೆ ಲಂಕಾ ಕ್ರಿಕೆಟಿಗರಿಂದ ಬೆದರಿಕೆ

ಕೊಲಂಬೋ: ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾ ಕ್ರಿಕೆಟ್ ತಂಡ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಪರದಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೆಚ್ಚಿನ ಸರಣಿಗಳನ್ನು ಲಂಕಾ ಸಾಲು ಸಾಲಾಗಿ ಸೋಲುತ್ತಿದೆ. ಅಲ್ಲದೆ ಕಳೆದ 5 ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್‌ಸಿಎಲ್) ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿ ಒಟ್ಟು 9 ನಾಯಕರನ್ನು ಬದಲಿಸಿದೆ. ಕುಸಾಲ್ ಪೆರೆರಾ ಸದ್ಯ ಲಂಕಾ ತಂಡದ ಆಟಗಾರರಾಗಿದ್ದಾರೆ. ಈಗ ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಲಂಕಾ ಬೋರ್ಡ್‌ನ ಬಹುತೇಕ ಆಟಗಾರರಿಗೆ ಹೊಸ ಶ್ರೇಣೀಕರಣ ವ್ಯವಸ್ಥೆ ಖುಷಿ ನೀಡಿಲ್ಲ. ಹೀಗಾಗಿ ಕ್ರಿಕೆಟಿಗರೆಲ್ಲ ಸೇರಿ, ತಾವು ಬೇಗನೆ ನಿವೃತ್ತಿ ಘೋಷಿಸುವುದಾಗಿ ಎಸ್‌ಸಿಎಲ್‌ಗೆ ಬೆದರಿಕೆಯೊಡ್ಡುತ್ತಿರುವುದಾಗಿ ವರದಿಯೊಂದು ಹೇಳಿದೆ. ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ನೂತನ ಶ್ರೇಣೀಕರಣ (ಗ್ರೇಡಿಂಗ್) ಪರಿಚಯಿಸಿದೆ. ಅದರ ಪ್ರಕಾರ ಫಿಟ್ನೆಸ್, ಶಿಸ್ತು, ಕಳೆದ 5 ವರ್ಷಗಳಲ್ಲಿ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನ, ನಾಯಕತ್ವದ ಕೌಶಲ ಮತ್ತು ಒಟ್ಟಾರೆ ಆಟಗಾರನ ಮೌಲ್ಯ ಇವುಗಳನ್ನೆಲ್ಲ ಸೇರಿಸಿ ಒಟ್ಟು 4 ವಿಭಾಗಗಳಲ್ಲಿ ಅಂಕ ನೀಡಿ ಶ್ರೇಣಿ ನೀಡಲಾಗುತ್ತದೆ. ಆದರೆ ಕ್ರಿಕೆಟ್ ಬೋರ್ಡ್‌ನ ಈ ಶ್ರೇಣೀಕರಣ ವ್ಯವಸ್ಥೆ ಆಟಗಾರರಿಗೆ ಸರಿ ಕಾಣಿಸಿಲ್ಲ. ಅವರು, ಈ ಶ್ರೇಣೀ ವ್ಯವಸ್ಥೆಯಿಂದ ನಮ್ಮ ಸಂಬಳಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ನಮ್ಮ ಆದಾಯ ಕಡಿಮೆಯಾಗುತ್ತದೆ. ಶ್ರೇಣೀಕರಣದಲ್ಲಿ ಹೆಚ್ಚು ಪಾದರ್ಶಕತೆ ಬೇಕು ಎಂದು ಬೋರ್ಡನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ಗೆ ಲಂಕಾ ಕ್ರಿಕೆಟಿಗರಿಂದ ಬೆದರಿಕೆ

ಕೊಲಂಬೋ: ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾ ಕ್ರಿಕೆಟ್ ತಂಡ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಪರದಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೆಚ್ಚಿನ ಸರಣಿಗಳನ್ನು ಲಂಕಾ ಸಾಲು ಸಾಲಾಗಿ ಸೋಲುತ್ತಿದೆ. ಅಲ್ಲದೆ ಕಳೆದ 5 ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್‌ಸಿಎಲ್) ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿ ಒಟ್ಟು 9 ನಾಯಕರನ್ನು ಬದಲಿಸಿದೆ.
ಕುಸಾಲ್ ಪೆರೆರಾ ಸದ್ಯ ಲಂಕಾ ತಂಡದ ಆಟಗಾರರಾಗಿದ್ದಾರೆ. ಈಗ ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಲಂಕಾ ಬೋರ್ಡ್‌ನ ಬಹುತೇಕ ಆಟಗಾರರಿಗೆ ಹೊಸ ಶ್ರೇಣೀಕರಣ ವ್ಯವಸ್ಥೆ ಖುಷಿ ನೀಡಿಲ್ಲ. ಹೀಗಾಗಿ ಕ್ರಿಕೆಟಿಗರೆಲ್ಲ ಸೇರಿ, ತಾವು ಬೇಗನೆ ನಿವೃತ್ತಿ ಘೋಷಿಸುವುದಾಗಿ ಎಸ್‌ಸಿಎಲ್‌ಗೆ ಬೆದರಿಕೆಯೊಡ್ಡುತ್ತಿರುವುದಾಗಿ ವರದಿಯೊಂದು ಹೇಳಿದೆ.

ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ನೂತನ ಶ್ರೇಣೀಕರಣ (ಗ್ರೇಡಿಂಗ್) ಪರಿಚಯಿಸಿದೆ. ಅದರ ಪ್ರಕಾರ ಫಿಟ್ನೆಸ್, ಶಿಸ್ತು, ಕಳೆದ 5 ವರ್ಷಗಳಲ್ಲಿ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನ, ನಾಯಕತ್ವದ ಕೌಶಲ ಮತ್ತು ಒಟ್ಟಾರೆ ಆಟಗಾರನ ಮೌಲ್ಯ ಇವುಗಳನ್ನೆಲ್ಲ ಸೇರಿಸಿ ಒಟ್ಟು 4 ವಿಭಾಗಗಳಲ್ಲಿ ಅಂಕ ನೀಡಿ ಶ್ರೇಣಿ ನೀಡಲಾಗುತ್ತದೆ.
ಆದರೆ ಕ್ರಿಕೆಟ್ ಬೋರ್ಡ್‌ನ ಈ ಶ್ರೇಣೀಕರಣ ವ್ಯವಸ್ಥೆ ಆಟಗಾರರಿಗೆ ಸರಿ ಕಾಣಿಸಿಲ್ಲ. ಅವರು, ಈ ಶ್ರೇಣೀ ವ್ಯವಸ್ಥೆಯಿಂದ ನಮ್ಮ ಸಂಬಳಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ನಮ್ಮ ಆದಾಯ ಕಡಿಮೆಯಾಗುತ್ತದೆ. ಶ್ರೇಣೀಕರಣದಲ್ಲಿ ಹೆಚ್ಚು ಪಾದರ್ಶಕತೆ ಬೇಕು ಎಂದು ಬೋರ್ಡನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.