ದೇಶದ ಸಮಗ್ರತೆಗೆ ಧಕ್ಕೆ ತರುವ ಸುದ್ದಿ ಪ್ರಸಾರ ಮಾಡುವ ಮುನ್ನ ಎಚ್ಚರ; ಮಾಧ್ಯಮಗಳಿಗೆ ಅನುರಾಗ್ ಠಾಕೂರ್ ಸೂಚನೆ

ನವದೆಹಲಿ: ದೇಶದ ಮಾಧ್ಯಮ ಬಂಧುಗಳು ಜಾಗರೂಕರಾಗಿರಬೇಕು ಮತ್ತು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಶನಿವಾರ ಎಚ್ಚರಿಸಿದ್ದಾರೆ.
ಮಲಯಾಳಂನ ಖ್ಯಾತ ದಿನಪತ್ರಿಕೆ 'ಮಾತೃಭೂಮಿ'ಯ ಶತಮಾನೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಠಾಕೂರ್, ʻದೇಶದೊಳಗೆ ಅಥವಾ ಹೊರಗೆ ವ್ಯಕ್ತಪಡಿಸಿದ ಆಧಾರರಹಿತ ಮತ್ತು ತರ್ಕಬದ್ಧವಲ್ಲದ ಅಭಿಪ್ರಾಯವು ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಮಾಡಲು ಸಾಧ್ಯವಿಲ್ಲ. ಭಾರತದ ಸಮಗ್ರತೆಗೆ ಧಕ್ಕೆ ತರುವಂತಹ ಧ್ವನಿಗಳು ಮತ್ತು ನಿರೂಪಣೆಗಳಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೂ ಅವಕಾಶ ನೀಡುವುದನ್ನು ತಡೆಯಲು ಮತ್ತು ಮಾಧ್ಯಮ ಭ್ರಾತೃತ್ವವನ್ನು ಜಾಗರೂಕರಾಗಿರಲು ನಾನು ಒತ್ತಾಯಿಸುತ್ತೇನೆʼ ಎಂದು ಹೇಳಿದರು.
'ಭಾರತದ ಅಖಂಡತೆಗೆ ಧಕ್ಕೆ ತರುವಂತಹ ಗೊತ್ತಿದ್ದೋ ಅಥವಾ ತಿಳಿಯದೆಯೋ ಇಂತಹ ಧ್ವನಿಗಳು ಮತ್ತು ನಿರೂಪಣೆಗಳಿಗೆ ಜಾಗ ನೀಡದಂತೆ ಮಾಧ್ಯಮ ಬಂಧುಗಳು ಜಾಗೃತರಾಗಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಅವರು ಹೇಳಿದರು.