ಟೆಸ್ಟ್ ವೃತ್ತಿಜೀವನದ ಅತಿ ವೇಗದ ಶತಕ ಸಿಡಿಸಿದ ಪೂಜಾರ; ಬಾಂಗ್ಲಾಕ್ಕೆ 512 ರನ್​ಗಳ ಗುರಿ

ಟೆಸ್ಟ್ ವೃತ್ತಿಜೀವನದ ಅತಿ ವೇಗದ ಶತಕ ಸಿಡಿಸಿದ ಪೂಜಾರ; ಬಾಂಗ್ಲಾಕ್ಕೆ 512 ರನ್​ಗಳ ಗುರಿ

ಮೂರು ವರ್ಷಗಳ ನಂತರ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದ ಅತಿ ವೇಗದ ಶತಕ ಸಿಡಿಸಿದ್ದಾರೆ. ಪೂಜಾರ ಶತಕ ಪೂರೈಸಿದ ಕೂಡಲೇ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಬಾಂಗ್ಲಾದೇಶಕ್ಕೆ 512 ರನ್​ಗಳ ಟಾರ್ಗೆಟ್ ನೀಡಲಾಗಿದೆ. ಈ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ 90 ರನ್​ಗಳಿಸಿ ಔಟ್ ಆಗಿದ್ದರು.