ಸುಳ್ಳು ವಿಡಿಯೋಗಳಿಗೆ ತಲೆಗೊಡದೇ ನಿಯಮಿತವಾಗಿ ವ್ಯಾಯಾಮ ಮಾಡಿ

ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೆಲವೊಂದು ಕಿಡಿಗೇಡಿಗಳು ವ್ಯಾಯಾಮ ಶಾಲೆ, ಕುಸ್ತಿ, ಫಿಟನೆಸ್ ಸೆಂಟರ್ ಹಾಗೂ ಜಿಮ್ ಗೆ ಹೋಗುವುದಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ತಲೆಕೊಡದೇ ತಜ್ಞರ ಸಲಹೆ ಮೇರೆಗೆ ಆರೋಗ್ಯ ಸಂಬಂಧಿಸಿದ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತರರಾಷ್ಟ್ರೀಯ ದೇಹದಾಢ್ರ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ ಹೇಳಿದರು. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ, ದಿ.ಪುನೀತ್ ರಾಜಕುಮಾರ ಅವರು ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಕೆಲವೊಂದು ಕಿಡಗೇಡಿಗಳು ಇದನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಮೂಲಕ ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ. ನಟ ಪುನೀತ್ ರಾಜಕುಮಾರ ಅವರ ಹೃದಯಾಘಾತಕ್ಕೂ ಮತ್ತು ಅವರ ಫಿಟನೆಸ್, ಜಿಮ್‍ಗೂ ಯಾವುದೇ ಸಂಬಂಧವಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶರೀಫ್ ಮುಲ್ಲಾ, ಆನಂದ ಕುಮಾರ ಅಂಗಡಿ, ಸುರೇಶ ಮುಳಗುಂದ, ಓಂ ಸಂಗಮೇಶ್ವರ ಐಹೋಳಿ, ವಿ.ಎಸ್.ಗಂಟಿಮಠ ಇದ್ದರು.