ಹು-ಧಾ ಪಾಲಿಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬಿಜೆಪಿ ಶಾಸಕ ಬೆಲ್ಲದ | Dharwad |
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕೊನೆಗೂ ಬಿಡುಗಡೆ ಮಾಡಿದೆ. ಅವಳಿ ನಗರದ ಜಿಲ್ಲಾಧ್ಯಕ್ಷ ಹಾಗೂ ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮಹಾನಗರ ಪಾಲಿಕೆಯ ೨೬ ವಾರ್ಡ್ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿದ್ದು, ನಿನ್ನೆ ತಡರಾತ್ರಿ ಆ ಪಟ್ಟಿ ಬಿಡುಗಡೆ ಮಾಡಿದೆ. ೨೬ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರೂ ಆದ ಅರವಿಂದ ಬೆಲ್ಲದ ಅವರು ಫೈನಲ್ ಮಾಡಿ ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡದ ಒಟ್ಟು ೮೨ ವಾರ್ಡ್ಗಳ ಪೈಕಿ ೨೬ ವಾರ್ಡ್ಗಳಿಗೆ ಟೆಕೆಟ್ ಘೋಷಣೆ ಮಾಡಿದೆ.