ಕಡೂರು ಮೂಲದ ಯೋಧ ಜಮ್ಮುವಿನ ನಿಧನ

ಭಾರತ ಮಾತೆ ಸೇವೆ ಮಾಡಲು ಸೈನಿಕರು ಆಗ್ತಾರೆ. ಸುಮಾರು ವರ್ಷಗಳ ಕಾಲ ಸೇವೆಗೈದು ಕಡೂರು ಮೂಲದ ಯೋಧ ಜಮ್ಮುವಿನ ನಿಧನರಾಗಿದ್ದಾರೆ. ಬಿ.ಕೆ ಶೇಷಪ್ಪ (45) ಮೃತ ಯೋಧರಾಗಿದ್ದು. ಜಮ್ಮುವಿನಲ್ಲಿ ಬಿಎಸ್ ಎಫ್ ನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವಾಗ್ ನಾಲ್ಕು ದಿನದ ಹಿಂದೆ ವಾಹನ ರಿಪೇರಿ ಮಾಡುವಾಗ ತಲೆಗೆ ಗಾಯವಾಗಿತ್ತು, ಜಾಕ್ ಸ್ಲೀಪ್ ಆಗಿ ತಲೆಗೆ ಗಂಭೀರಗಾಯವಾಗಿತ್ತು. ನಾಲ್ಕು ದಿನದಿಂದ ಕೋಮಾದಲ್ಲಿದ್ದ ಬಿ.ಕೆ ಶೇಷಪ್ಪ ಅವರು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇನ್ನು ಕಡೂರು ತಾಲೂಕಿನ ಬಿಳವಾಲ ಗ್ರಾಮದ ಯೋಧನ ಅಂತ್ಯಕ್ರಿಯೆ ನಡೆಯಲಿದೆ.