ಅಮೆರಿಕ ಹತ್ತಿರ ಬಾಂಬರ್ ವಿಮಾನ ಹಾರಿಸಿ ಝಲಕ್ ತೋರಿಸಿದೆ ರಷ್ಯಾ
ಚೀನಾದ ಬೇಹುಗಾರಿಕಾ ಬಲೂನೊಂದು ಅಮೆರಿಕದ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಘಟನೆಯಿನ್ನೂ ಹಸಿಯಾಗಿರುವಾಗಲೇ ಅಮೆರಿಕದ ಅಂತರಾಷ್ಟ್ರೀಯ ವಾಯು ಗಡಿ ರೇಖೆಯ ಬಳಿ ಇನ್ನೊಂದು ಘಟನೆ ವರದಿಯಾಗಿದೆ.
ಈ ಬಾರಿ ಇದು ವಾಯುಪ್ರದೇಶದ ಉಲ್ಲಂಘನೆ ಅಥವಾ ಮಾನವರಹಿತ ವಾಯುವಾಹಕಗಳ ಹಾರಾಟವೂ ಅಲ್ಲ.
ಸೋಮವಾರ ಈ ವಿಮಾನಗಳು ಹಾರಾಟ ನಡೆಸಿರುವುದನ್ನು ಅಮೆರಿಕವು ಪತ್ತೆಹಚ್ಚಿದೆ. ಆದರೆ ರಷ್ಯಾದ ಈ ವಿಮಾನಗಳು ಯುಎಸ್ ಅಥವಾ ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಿಲ್ಲ, ಯಾವುದೇ ಬೆದರಿಕೆ ಉಂಟು ಮಾಡಿಲ್ಲ. ಈ ರಷ್ಯಾದ ಚಟುವಟಿಕೆಯನ್ನು ನಿರೀಕ್ಷಿಸಿತ್ತು .ಅಮೆರಿಕದ ಎರಡು NORAD F-16 ಯುದ್ಧವಿಮಾನಗಳು ರಷ್ಯಾದ ವಿಮಾನವನ್ನು ತಡೆದಿವೆ" ಎಂದು NORAD ಹೇಳಿದೆ.
ಈ ಕುರಿತು ರಷ್ಯಾ ಪ್ರತಿಕ್ರಿಯಿಸಿದ್ದು ಅಲಾಸ್ಕಾ ಮತ್ತು ರಷ್ಯಾ ನಡುವಿನ ಬೇರಿಂಗ್ ಸಮುದ್ರ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಎಂದಿನ ಕಾರ್ಯಾಚರಣೆಗಳ ಭಾಗವಾಗಿ ಅಂತರರಾಷ್ಟ್ರೀಯ ನೀರಿನ ಮೇಲೆ ಹಲವಾರು ವಿಮಾನಗಳ ಹಾರಾಟ ನಡೆಸಿವೆ. ಎರಡು Tu-95MS ಕಾರ್ಯತಂತ್ರದ ಕ್ಷಿಪಣಿ ವಾಹಕಗಳು Su-30 ಜೆಟ್ಗಳೊಂದಿಗೆ ಬೇರಿಂಗ್ ಸಮುದ್ರದ ಮೇಲೆ ಹಾರಾಟ ನಡೆಸಿವೆ ಎಂದು ಹೇಳಿದೆ. ಆದರೆ ಅದರ ವಿಮಾನಗಳು ತಡೆಹಿಡಿಯಲ್ಪಟ್ಟಿವೆಯೇ ಎಂಬುದರ ಕುರಿತು ರಷ್ಯಾ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. "ದೀರ್ಘ-ಶ್ರೇಣಿಯ ವಾಯುಯಾನ ಪೈಲಟ್ಗಳು ಆರ್ಕ್ಟಿಕ್, ಉತ್ತರ ಅಟ್ಲಾಂಟಿಕ್, ಕಪ್ಪು ಸಮುದ್ರ, ಬಾಲ್ಟಿಕ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ತಟಸ್ಥ ನೀರಿನ ಮೇಲೆ ನಿಯಮಿತವಾಗಿ ಹಾರಾಟ ನಡೆಸುತ್ತಾರೆ" ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.