ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ : ತವರು ಜಿಲ್ಲೆಯಲ್ಲೇ 'ಸಿದ್ದರಾಮಯ್ಯಗೆ ಭಾರೀ ಅಪಮಾನ'

ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ : ತವರು ಜಿಲ್ಲೆಯಲ್ಲೇ 'ಸಿದ್ದರಾಮಯ್ಯಗೆ ಭಾರೀ ಅಪಮಾನ'

ಮೈಸೂರು : ಹೆಚ್.ಡಿ ಕೋಟೆಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವೇದಿಕೆ ಮೇಲಿನ ಬ್ಯಾನರ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಫೋಟೋ ಹಾಕದೇ ಭಾರೀ ಅಪಮಾನಕ್ಕೆ ಒಳಗಾದ ಘಟನೆ ಬೆಳಕಿಗೆ ಬಂದಿದೆ.

ಮುಂದಿನ ಚುನಾವಣಾ ಹೊತ್ತಲೆ ಚುನಾವಣೆ ಹೊತ್ತಿನ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಯ ಫೋಟೋ ಬಳಕೆ ಮಾಡದೇ ಇರುವುದು, ಶಾಸಕರ ಭಾಷಣದಲ್ಲಿ ಸಾಧನೆ ಉಲ್ಲೇಖಿಸದೆ ಇರುವುದು ಸಿದ್ದರಾಮಯ್ಯರ ಕಡಗಣನೆಯಾಗಿ ಕಾಣಿಸಿದಂತಾಗಿದೆ. ಅಷ್ಟೇ ಅಲ್ಲದೇ ಪ್ರಜಾಧ್ವನಿ ಸಮಾವೇಶದಲ್ಲಿ ಬ್ಯಾನರ್‍ನಲ್ಲಿ 31 ನಾಯಕರ ಫೋಟೋಗಳ ನಡುವೆ ಸಿದ್ದರಾಮಯ್ಯ ಫೋಟೋ ಇರಲಿಲ್ಲ. ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಪಕ್ಕದಲ್ಲಿ ಕುಳಿತಿದ್ದ ಶಾಸಕ ಅನಿಲ್ ಚಿಕ್ಕಮಾದು ಸಹ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿರುವುದಾಗಿ ತಿಳಿದುಬಂದಿದೆ. ಶಾಸಕ ಅನಿಲ್ ಸಮಾವೇಶದಲ್ಲಿ ಮಾತನಾಡುತ್ತಾ, ನನ್ನ ತಂದೆಗೆ ಶಿವಕುಮಾರ್ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಯಾವ ಕೆಲಸಗಳನ್ನು ಪ್ರಸ್ತಾಪವನ್ನೆ ಮಾಡಲಿಲ್ಲ ಈ ಎಲ್ಲಾ ದೃಷ್ಟಿಕೋನದಿಂದಾಗಿ ತವರು ಜಿಲ್ಲೆಯಲ್ಲೇ ಸಿದ್ದರಾಮಯ್ಯಗೆ ಭಾರೀ ಅಪಮಾನ ಮಾಡಿದಂತಾಗಿದೆ.