ಶುದ್ಧೀಕರಣ ಘಟಕ ನಿರ್ಮಾಣದಲ್ಲಿ ಅಧಿಕಾರಿಗಳ ಗೋಲ್ಮಾಲ್, ಸಾರ್ವಜನಿಕರ ಪರದಾಟ

ಒಂದು ಕಡೆ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ತುಕ್ಕು ಹಿಡಿದು ಬಿದ್ದಿರುವ ದೃಶ್ಯಗಳು... ಮೊತ್ತೊಂದು ಕಡೆ ಶುದ್ಧೀಕರಣ ಘಟಕದಲ್ಲಿ ಬರುತ್ತಿರುವ ಕಲುಷಿತ ನೀರು..ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ಗೋಲ್ಮಾಲ್ನಿಂದಾಗಿ ಇಂದು ಲಕ್ಷಾಂತರ ಅನುದಾನದಲ್ಲಿ ನಿರ್ಮಾಣವಾದ ಶುದ್ಧಿಕರಣ ಘಟಕ ಹಾಳು ಬಿದ್ದಿದೆ. ಹೌದು ಬೀದರ್ ತಾಲೂಕಿನ ಚಿಟ್ಟಾ ಬಳಿಯ ಹೌಸಿಂಗ್ ಬೋರ್ಡ್ ಕಾಲೋನಿಯ ಜನ್ರಿಗೆ ಸಿಗಬೇಕಾದ ಶುದ್ಧ ಕುಡಿಯುವ ನೀರು ಯೋಜನೆಯಲ್ಲೂ ಅಧಿಕಾರಿಗಳು ಗೋಲ್ಮಾಲ್ ಮಾಡಿದ್ದಾರೆ. ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿಯಿಂದ ಬರೋಬ್ಬರಿ 80 ಲಕ್ಷ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ... ಆದ್ರೆ 10 ವರ್ಷಗಳಾದ್ರು ಕೆ ಎಚ್ಬಿ ಕಾಲೋನಿಯ ಜನ್ರಿಗೆ ಒಂದು ಹನಿ ನೀರು ಕೂಡ ಸರಬರಾಜಾಗಿಲ್ಲ. ಇದಕ್ಕೆ ಕಾರಣ ಗೃಹ ಮಂಡಳಿ ಹಾಗೂ ಸ್ಥಳೀಯ ಅಧಿಕಾರಿಗಳು ಕಳೆಪೆ ಕಾಮಗಾರಿ ಮಾಡಿ ಲಕ್ಷಾಂತರ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಇದ್ರಿಂದಾಗಿ ಸರಿಯಾಗಿ ಶುದ್ಧಿಕರಣ ಘಟಕವನ್ನು ನಿರ್ವಹಣೆ ಮಾಡದೆ ಇರುವ ಕಾರಣ ಇಡೀ ಘಟಕ ಪಾಳುಕೊಂಪೆಯಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು