ಹಾವು ಸಾಕುವುದರಲ್ಲಿ ನಿಸ್ಸೀಮರು ಈ ಊರಿನ ಜನ..!

ಹಾವು ಸಾಕಾಣಿಕೆ ಭಾರತದಲ್ಲಿ ವಿರಳ. ಆದರೆ, ವಿದೇಶಗಳಲ್ಲಿ ಈ ಹವ್ಯಾಸ ಸಾಕಷ್ಟಿದೆ. ಕೇವಲ ಹವ್ಯಾಸಕ್ಕಾಗಿ ಮಾತ್ರವಲ್ಲ ಹಾವು ಸಾಕಣೆಯಿಂದ ಕೋಟ್ಯಾಂತರ ರೂ. ಆದಾಯವನ್ನೂ ಗಳಿಸುತ್ತಾರೆ. ಚೀನಾದ ಜಿಸಿಕಿಯಾವೊ ಎಂಬ ಪುಟ್ಟ ಗ್ರಾಮವು ಹಾವು ಸಾಕಣೆಗೆ ಹೆಸರುವಾಸಿಯಾಗಿದೆ, ಇಲ್ಲಿನ ಗ್ರಾಮಸ್ಥರು ಹಾವು ಸಾಕಣೆಯಿಂದ ಮಾತ್ರ ಪ್ರತಿ ವರ್ಷ ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರೆ. ಇಲ್ಲಿನ ವಾರ್ಷಿಕ ವಹಿವಾಟು ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ.