ಮುಂದೊಂದು ದಿನ ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗ್ತಾಳೆʼ

ಮುಂದೊಂದು ದಿನ ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗ್ತಾಳೆʼ

ಬೆಂಗಳೂರು : ಮುಸ್ಲಿಂ ಅಸ್ಮಿತೆಗೆ ಬಿಜೆಪಿ ವಿರುದ್ಧವಾಗಿದೆ. ಮುಂದೊಂದು ದಿನ ಹಿಜಾಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಿಯನ್ನಾಗಿ ನೋಡಲು ನಾನು ಬಯಸುತ್ತೇನೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಸ್ಲಿಮರನ್ನು ದೇಶದಿಂದ ತೊಲಗಿಸುವುದೇ ಬಿಜೆಪಿಯ ಗುರಿ.

ಹಲಾಲ್‌ ಮಾಂಸದ ಬಗ್ಗೆ ಮಾತನಾಡುವಪಡೆಯುತ್ತಾರೆ. ಈ ಕುರಿತು ನನ್ನ ಬಳಿ ಸಾಕಷ್ಟು ವಿಡಿಯೋ ಸಾಕ್ಷಿಗಳಿವೆ ಎಂದು ಓವೈಸಿ ಆರೋಪಿಸಿದ್ದಾರೆ. ಅಲ್ಲದೆ, ಮೋದಿ ಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇವಲ ಭಾಷಣಕ್ಕೆ ಸಿಮಿತವಾಗಿದೆ ಎಂದು ಕಿಡಿಕಾರಿದರು.ಆರ್‌ಎಸ್‌ಎಸ್‌, ಕ್ರಿಶ್ಚಿಯನ್ನ ಶಾಲೆ, ಶಿಕ್ಷಣ ಸಂಸ್ಥೆಗಳ ತನಿಖೆ : ಮದರಸಾಗಳ ಸಮೀಕ್ಷೆ ಒಂದು ಧರ್ಮದ ಟಾರ್ಗೆಟ್‌. ಕೇವಲ ಮದರಸಾಗಳನ್ನು ಸರ್ವೆ ಮಾಡಲುವ ಬದಲು ಆರ್‌ಎಸ್‌ಎಸ್‌ನವರು ನಡೆಸುತ್ತಿರುವ ಶಿಶುಮಂದಿರ, ಶಾಲೆ, ಕ್ರಿಶ್ಚಿಯನ್ನರ ಶಾಲೆ, ಶಿಕ್ಷಣ ಸಂಸ್ಥೆಗಳನ್ನು ಬಗ್ಗೆ ತನಿಖೆ ನಡೆಯಲಿ ಎಂದು ಓವೈಸಿ ಆಗ್ರಹಿಸಿದರು. ಹಲಾಲ್ ಮಾಂಸ, ಮುಸಲ್ಮಾನರ ಗಡ್ಡ, ಟೋಪಿ, ಆಹಾರ, ಬಟ್ಟೆ, ಎಲ್ಲವೂ ಬಿಜೆಪಿಯ ಅಜೆಂಡಾ ಎಂದಿದ್ದಾರೆ.