ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಗೆಳೆತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪಾಪಿ ಗೆಳೆಯ

ಬೆಂಗಳೂರು: ಪ್ರೇಮಿಗಳ ನಡುವೆ ಜಗಳ ಶುರುವಾಗಿ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ನೇಪಾಳ ಮೂಲದ ಕೃಷ್ಣಕುಮಾರಿ ಅಂತ ಗುರುತಿಸಲಾಗಿದ್ದು, ಕೃಷ್ಣಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು ವೇಳೆ ನೇಪಾಳ ಮೂಲದ ಸಂತೋಷ್ ದಾಮಿ ಎನ್ನುವವ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿದೆ.
ಈ ವೇಳೆ, ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ರೂಮ್‍ನ್ನು ಪಡೆದು ಕೊಂಡು ಇಬ್ಬರು ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದ್ದು, ಜಗಳದಲ್ಲಿ ಸಂತೋಷ್ ದಾಮಿ ಕೃಷ್ಣಕುಮಾರಿಯ ತಲೆಯನ್ನು ಗೋಡೆಗೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಘಟನ ಸ್ಥಳಕ್ಕೆ ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.