ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: 2 ವರ್ಷದ ನಂತರ ದರ 300 ರೂ. ಹೆಚ್ಚಳ
ಎರಡು ವರ್ಷದ ನಂತರ ಮೆಕ್ಕೆಜೋಳ ಬೆಳೆಗಾರರಿಗೆ ಕೊಂಚ ಸಿಹಿ ಸುದ್ದಿ ಸಿಕ್ಕಿದೆ. ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ 300 ರೂ.ನಷ್ಟು ಹೆಚ್ಚಳವಾಗಿದೆ.
ಬಹುತೇಕ ಭಾಗದಲ್ಲಿ ಮಳೆ ಸುರಿದ ಕಾರಣ ಕೊಯ್ಲಿಗೆ ಬಂದಿದ್ದ ಬೆಳೆ ಹಾಳಾಗಿದೆ. ಇಳುವರಿ ಕುಸಿತವಾದ ಹಿನ್ನೆಲೆಯಲ್ಲಿ ಮೆಕ್ಕೆಜೋಳ ದರ 1400 ರಿಂದ 1700 ರೂಪಾಯಿಗಳು ಏರಿಕೆಯಾಗಿದೆ.
ಈಗ 300 ರೂಪಾಯಿಯಷ್ಟು ಏರಿಕೆಯಾಗಿದೆ. ಸುಗ್ಗಿ ಆರಂಭವಾಗುತ್ತಿದ್ದಂತೆ ಮೆಕ್ಕೆಜೋಳ ದರ ಏರಿಕೆ ಕಂಡಿದ್ದು, ಸುಗ್ಗಿ ಮುಗಿಯುವವರೆಗೂ ಇದೇ ದರ ಇದ್ದರೆ ರೈತರಿಗೆ ಅನುಕೂಲವಾಗುತ್ತದೆ. ಇದರೊಂದಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.