PFI’ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್; ರಿಟ್ ಅರ್ಜಿ ವಜಾ

PFI’ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್; ರಿಟ್ ಅರ್ಜಿ ವಜಾ

ಬೆಂಗಳೂರು: ಪಿಎಫ್‍ಐ ಸಂಘಟನೆ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಪಿಎಫ್‍ಐ ನಿಷೇಧವನ್ನ ಎತ್ತಿ ಹಿಡಿದಿದೆ. ಪಿಎಫ್ಐ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದನ್ನ ಪ್ರಶ್ನಿಸಿ ನಾಸಿರ್ ಪಾಷಾ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ರಿಟ್ ಅರ್ಜಿಯನ್ನ ಸಲ್ಲಿಸಿದ್ದರು. ಸದ್ಯ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಪಿಎಫ್‍ಐ ಸಂಘಟನೆ ನಿಷೇಧವನ್ನ ಎತ್ತಿ ಹಿಡಿದಿದೆ.