ಗುರುಸ್ವಾಮಿ ಜೊತೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೊರಟ ಶ್ವಾನ

ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಗೆ ತೆರಳುತ್ತಾರೆ. ಆದರೆ ಬೀದಿ ಶ್ವಾನವೊಂದು ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ 200 ಕಿ.ಮೀ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ ದರ್ಶನಕ್ಕೆ ಹೊರಟಿದೆ. ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿ ಇದ್ದ ಈ ಬೀದಿನಾಯಿ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದೆ. ಈ ಹೆಣ್ಣು ನಾಯಿಗೆ ಮಾಳಗಿ ಎಂದು ಹೆಸರಿಡಲಾಗಿದೆ. ಜೊತೆಗೆ ಅದರ ಕೊರಳಿಗೆ ಕಪ್ಪು ಬಟ್ಟೆಯನ್ನೂ ಕಟ್ಟಿ ಅಯ್ಯಪ್ಪನ ದರ್ಶನಕ್ಕೆಂದು ಕರೆದೊಯ್ಯಲಾಗ್ತಿದೆ.