ಬ್ಯಾಡಗಿ ಮೆಣಸಿನಕಾಯಿ: ದಾಖಲೆ ಪ್ರಮಾಣದಲ್ಲಿ ಆವಕ

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 1.84 ಲಕ್ಷ ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆ ಆವಕ ಎನಿಸಿದೆ.
ಕಳೆದ ಮೂರು ವಾರಗಳಿಂದ ಪ್ರತಿ ವಾರ ಒಂದೂವರೆ ಲಕ್ಷಕ್ಕೂ ಅಧಿ ಕ ಚೀಲಗಳಷ್ಟು ಆವಕವಾಗುತ್ತಿದ್ದು, ಚೀಲಗಳ ಸಂಖ್ಯೆಯಲ್ಲಿ 10ರಿಂದ 15 ಸಾವಿರ ಏರಿಕೆಯಾಗುತ್ತಾ ಸಾಗಿದೆ.
ಗುರುವಾರದ ಮಾರುಕಟ್ಟೆ ದರ
ಎಪಿಎಂಸಿಯಲ್ಲಿ ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 2,709, ಗರಿಷ್ಠ 67,711, ಸರಾಸರಿ 32,299, ಡಬ್ಬಿ ತಳಿ ಕನಿಷ್ಠ 4,009, ಗರಿಷ್ಠ 71,711, ಸರಾಸರಿ 39,000, ಗುಂಟೂರು ಕನಿಷ್ಠ 1,589, ಗರಿಷ್ಠ 22,389, ಸರಾಸರಿ 17,569 ರೂ.ಗೆ ಮಾರಾಟವಾಗಿವೆ.